Wednesday, 14th May 2025

ತೂಗು ಸೇತುವೆ ಕುಸಿತ: ಶೋಧಕಾರ್ಯ ಸ್ಥಗಿತ

ಮೊರ್ಬಿ: ಗುಜರಾತಿನ ಮೊರ್ಬಿ ನಗರದ ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 135 ಮಂದಿ ಮೃತಪಟ್ಟಿದ್ದರು. ಬದುಕುಳಿದವರಿಗಾಗಿ ನಡೆಯುತ್ತಿದ್ದ ಶೋಧಕಾರ್ಯ ಈಗ ಸ್ಥಗಿತಗೊಂಡಿದೆ.

ನಾಪತ್ತೆಯಾಗಿರುವವರ ಯಾವುದೇ ದೂರುಗಳು ದಾಖಲಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸ ಲಾಗಿದ್ದು, ಆದರೂ ಕೂಡ ಅಗ್ನಿಶಾಮಕ ಪಡೆ ಸೇರಿದಂತೆ ಒಂದು ತಂಡ ಸ್ಥಳದಲ್ಲಿಯೇ ಬೀಡು ಬಿಡಲಿದೆ ಎಂದು ಹೇಳಲಾಗಿದೆ.

ಸೇತುವೆ, ದುರಸ್ತಿಗಾಗಿ ಕಳೆದ ಏಳು ತಿಂಗಳಿನಿಂದ ಬಂದ್ ಮಾಡಲಾಗಿದ್ದು, ಭಾನುವಾರ ದುರಂತ ನಡೆಯುವ ನಾಲ್ಕು ದಿನಗಳ ಹಿಂದಷ್ಟೇ ಇದನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು.

ಇದೀಗ ದುರಂತಕ್ಕೆ ಸಂಬಂಧಿಸಿದಂತೆ ದುರಸ್ತಿ ಗುತ್ತಿಗೆ ಪಡೆದಿದ್ದ ಕಂಪನಿಯ ಸಿಬ್ಬಂದಿ ಗಳನ್ನು ಬಂಧಿಸಲಾಗಿದೆ.