Monday, 12th May 2025

ಎನ್ಸಿಪಿಯ ಮೊಹಮ್ಮದ್ ಫೈಜಲ್ ಸದಸ್ಯತ್ವದ ಅನರ್ಹತೆ ರದ್ದು

ನವದೆಹಲಿ: ಲೋಕಸಭೆ ಸಚಿವಾಲಯ ಮಾ.29 ರಂದು ಎನ್ ಸಿಪಿ ನಾಯಕ ಮೊಹಮ್ಮದ್ ಫೈಜಲ್ ಅವರ ಸದಸ್ಯತ್ವದ ಅನರ್ಹತೆಯನ್ನು ರದ್ದುಗೊಳಿಸಿದೆ.
ಕ್ರಿಮಿನಲ್ ಪ್ರಕರಣವೊಂದರಲ್ಲಿ ಮೊಹಮ್ಮದ್ ಫೈಜಲ್ ಗೆ 10 ವರ್ಷಗಳ ಶಿಕ್ಷೆಯಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಜನವರಿ ತಿಂಗಳಲ್ಲಿ ಅನರ್ಹಗೊಳಿಸಲಾಗಿತ್ತು.
ಫೈಜಲ್ ಲಕ್ಷದ್ವೀಪವನ್ನು ಪ್ರತಿನಿಧಿಸುತ್ತಿದ್ದು, ತಮಗೆ 10 ವರ್ಷಗಳ ಶಿಕ್ಷೆ ಪ್ರಕಟಿಸಿರುವುದನ್ನು ಪ್ರಶ್ನಿಸಿ ಸೆಷನ್ಸ್ ಕೋರ್ಟ್ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಹಾಗೂ ಪ್ರಕಟವಾಗಿದ್ದ ಶಿಕ್ಷೆಯನ್ನು ಹೈಕೋರ್ಟ್ ಅಮಾನತು ಮಾಡಿತ್ತು.
“25.01.2023 ರಲ್ಲಿ ಹೈಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಮೊಹಮ್ಮದ್ ಫೈಜಲ್ ಅವರ ಅನರ್ಹತೆಯನ್ನು ಮುಂದಿನ ನ್ಯಾಯಾಂಗದ ಆದೇಶದವರೆಗೆ ರದ್ದುಗೊಳಿಸಲಾಗಿದೆ” ಎಂದು ಲೋಕಸಭಾ ಕಾರ್ಯದರ್ಶಿಗಳು ಅಧಿಸೂಚನೆಯ ಮೂಲಕ ತಿಳಿಸಿದ್ದಾರೆ.