Saturday, 10th May 2025

ಪ್ರಧಾನಿ ಮೋದಿಯ ಯುಎಇ, ಕುವೈತ್ ಭೇಟಿ ರದ್ದು

ನವದೆಹಲಿ : ಒಮಿಕ್ರಾನ್ ಕಳವಳದ ನಡುವೆ ಜನವರಿ 6ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಮತ್ತು ಕುವೈತ್ ಭೇಟಿಯನ್ನು ರದ್ದು ಪಡಿಸಲಾಗಿದೆ.

ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಭೇಟಿಯನ್ನ ಮರು ನಿಗದಿಪಡಿಸಬೇಕಾಗಿದ್ದು, ಫೆಬ್ರವರಿಯಲ್ಲಿ ನಿಗದಿಯಾಗುವ ಸಾಧ್ಯತೆಯಿದೆ.

ಕರೋನಾ ವೈರಸ್ʼನ ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಉಲ್ಬಣಗೊಳ್ಳುತ್ತಿದ್ದು, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಯುಎಸ್ʼನಲ್ಲಿ, ಒಮಿಕ್ರಾನ್ ಪ್ರಬಲ ವೈರಸ್ ಆಗಿದ್ದು, ಯುಕೆಯಲ್ಲಿ ಒಮೈಕ್ರಾನ್ʼನ ವೇಗ ವಾಗಿ ಹರಡಿರುವುದರಿಂದ ಪ್ರತಿದಿನ ಕೋವಿಡ್-19 ದಾಖಲೆಯ ಪ್ರಕರಣಗಳು ವರದಿಯಾಗಿವೆ.