Sunday, 11th May 2025

ತೋಳಿಲ್ಲದ ವಿಶೇಷ ಜಾಕೆಟ್ ಧರಿಸಿ ಬಂದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ತಿಗೆ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಿದ ವಸ್ತು ಗಳಿಂದ ತಯಾರಿಸಿದ ತೋಳಿಲ್ಲದ ವಿಶೇಷ ಜಾಕೆಟ್ ಧರಿಸಿ ಬಂದಿದ್ದರು.
ರಾಜ್ಯಸಭೆಯಲ್ಲಿ ಕುಳಿತಿದ್ದಾಗ ಪ್ರಧಾನಿಯವರು ತಿಳಿ ನೀಲಿ ಬಣ್ಣದ ‘ಸದ್ರಿ’ ಹಾಫ್ ಜಾಕೆಟ್ ಧರಿಸಿದ್ದರು. ಮೋದಿ ಧರಿಸಿದ್ದ ಜಾಕೆಟ್ ಏಕಬಳಕೆಯ ಪೆಟ್ ಬಾಟಲಿಗಳನ್ನು ಮರುಬಳಕೆ ಮಾಡಿದ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬೆಂಗಳೂರಿ ನಲ್ಲಿ ಆಯೋಜಿಸಿದ್ದ ‘ಭಾರತ ಇಂಧನ ಸಪ್ತಾಹ-2023’ಕ್ಕೆ ಫೆಬ್ರುವರಿ 06ರಂದು ಪ್ರಧಾನಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೋ ರೇಷನ್ (ಐಒಸಿ) ತಯಾರಿಸಿರುವ ಸೌರಶಕ್ತಿ ಆಧಾರಿತ ಕುಕ್ಟಾಪ್ ಹಾಗೂ ಬಳಸಿದ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿರುವ ವಸ್ತ್ರಗಳನ್ನು ಬಿಡುಗಡೆ ಮಾಡಿದರು.
ನರೇಂದ್ರ ಮೋದಿಯವರಿಗೆ ಇಂಡಿಯನ್ ಆಯಿಲ್​ನ ಅಧ್ಯಕ್ಷರು ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಿಂದ ತಯಾರಿಸಿದ ಪೇಟ ಮತ್ತು ಹಾಫ್ ಕೋಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

Read E-Paper click here