Monday, 12th May 2025

ಬಹುಕೋಟಿ ಮೌಲ್ಯದ ಹಲವಾರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಚೆನ್ನೈ: ತಮಿಳುನಾಡಿನಲ್ಲಿ ಬಹುಕೋಟಿ ಮೌಲ್ಯದ ಹಲವಾರು ಯೋಜನೆಗಳಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ನೆಹರೂ ಸ್ಟೇಡಿಯನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯ ಪಾಲ ಬನ್ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ, ಸಚಿವ ಸಂಪುಟದ ಇತರೆ ಸಚಿವರು, ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಹಿರಿಯ ಮುಖಂಡ ಎಂ. ತಂಬಿದುರೈ, ಕೆ.ಪಿ. ಮುನುಸಾಮಿ ಮತ್ತು ಮೈತ್ರಿಕೂಟದ ಇನ್ನಿತರ ಮುಖಂಡರು ಉಪಸ್ಥಿತ ರಿದ್ದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ₹2,640 ಕೋಟಿ ವೆಚ್ಚದ ಗ್ರ್ಯಾಂಡ್ ಅನಿಕಟ್ ಕಾಲುವೆ ವ್ಯವಸ್ಥೆಯ ವಿಸ್ತರಣೆ, ನವೀಕರಣ ಹಾಗೂ ಆಧುನೀಕರಣಕ್ಕೆ ಅಡಿಪಾಯ ಹಾಕಿದರು.

ಯೋಜನೆಗಳು

*ವಾಶರ್‌ಮನ್‌ಪೇಟ್‌ನಿಂದ ಉತ್ತರ ಚೆನ್ನೈನ ವಿಮ್ಕೊ ನಗರಕ್ಕೆ ಸಂಪರ್ಕಿಸುವ ₹3,770 ಕೋಟಿ ಮೌಲ್ಯದ ಮೆಟ್ರೊ ರೈಲ್ವೆ ಯೋಜನೆ.
*ಚೆನ್ನೈ ಬೀಚ್‌ನಿಂದ ಅಟ್ಟಿಪಟ್ಟು ವರೆಗೆ ನಾಲ್ಕನೇ ರೈಲ್ವೆ ಹಳಿ ಯೋಜನೆ; ₹293.40 ಮೌಲ್ಯ.
*ವಿಲ್ಲುಪುರಂ ಕಡಲೂರು-ಮೈಲಾದುರೈ ತಂಜಾವೂರು-ಮೈಲಾದುರೈ-ತಿರುವಾರೂರ್ ಸಿಂಗಲ್ ಲೈನ್ ರೈಲ್ವೆ ವಿದ್ಯುದ್ದೀಕರಣ.
*ಐಐಟಿ ಮದ್ರಾಸ್‌ನ ಡಿಸ್ಕವರಿ ಕ್ಯಾಂಪಸ್‌ಗೆ ಶಿಲಾನ್ಯಾಸ. ತಾಯಿಯೂರ್‌ನಲ್ಲಿ ಅಂದಾಜು ₹1,000 ಕೋಟಿ ವೆಚ್ಚದಲ್ಲಿ ಇದರ ನಿರ್ಮಾಣ.

 

Leave a Reply

Your email address will not be published. Required fields are marked *