Monday, 12th May 2025

ಕೋಲ್ಕತ್ತಾ ಬ್ರೇಕಿಂಗ್: ವರನಿಂದಲೇ ಮಾಡೆಲ್ ಅತ್ಯಾಚಾರ

ಕೋಲ್ಕತ್ತಾ: ನೈಟ್ ಕ್ಲಬ್ ಮ್ಯಾನೇಜರ್‌ ಮಾಡೆಲ್ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ನಂತರ ಸಂತ್ರಸ್ಥೆಯನ್ನು ಗರ್ಭಪಾತ ಮಾಡುವಂತೆ ಬಲವಂತಪಡಿಸಿರುವ ಬಗ್ಗೆಯೂ ವರದಿಯಾಗಿದೆ.

ಸೋನಾರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನೈಟ್ ಕ್ಲಬ್ ಮ್ಯಾನೇಜರ್ ತನ್ನೊಂದಿಗೆ ಸಾಮಾಜಿಕ ಮಾಧ್ಯಮ ದಲ್ಲಿ ಸ್ನೇಹ ಬೆಳೆಸಿದ್ದಾಗಿ ರೂಪದರ್ಶಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇವರಿಬ್ಬರ ಪೋಷಕರು ಈ ತಿಂಗಳ ಅಂತ್ಯದೊಳಗೆ ಮದುವೆ ಮಾಡಲು ಒಪ್ಪಿದ್ದರು ಎಂದು ಹೇಳಲಾಗಿದೆ.

ಸಂತ್ರಸ್ಥೆಯ ನಿಶ್ಚಿತ ವರ ಮನೆಗೆ ಬರುವಂತೆ, ತನ್ನ ಪೋಷಕರು ಆಕೆಯನ್ನು ಭೇಟಿಯಾಗಲು ಬಯಸುವುದಾಗಿ ಹೇಳಿದ್ದ. ಇದನ್ನು ನಂಬಿ ಮನೆಗೆ ಬಂದಾಗ ಆತ ಒಬ್ಬನೇ ಇದ್ದ ಎಂದು ಯುವತಿ ಆರೋಪಿಸಿ ದ್ದಾರೆ. ನಂತರ ಮೂರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ.

ಘಟನೆಯ ಎರಡು ವಾರಗಳ ನಂತರ, ಯುವತಿ ಅನಾರೋಗ್ಯಕ್ಕೆ ಒಳಗಾಗಿದ್ದು, ವೈದ್ಯಕೀಯ ತಪಾಸಣೆಗೆ ಹೋದಾಗ ಆಕೆ ಗರ್ಭಿಣಿ ಯಾಗಿರುವ ಬಗ್ಗೆ ತಿಳಿದುಬಂದಿದೆ. ಆಕೆಯ ನಿಶ್ಚಿತ ವರ ಹಾಗೂ ಅವನ ಮನೆಯವರು ಗರ್ಭಪಾತ ಮಾಡುವಂತೆ ಬಲವಂತ ಪಡಿಸಿದ್ದಾರೆ ಎಂದು ತನ್ನ ದೂರಿನಲ್ಲಿ ಸಂತ್ರಸ್ಥೆ ವಿವರಿಸಿದ್ದಾಳೆ.

Leave a Reply

Your email address will not be published. Required fields are marked *