Monday, 12th May 2025

Mirzapur Accident: ಭೀಕರ ರಸ್ತೆ ಅಪಘಾತ; 10 ಜನ ಸ್ಥಳದಲ್ಲೇ ಬಲಿ

Mirzapur accident

ವಾರಣಾಸಿ: ಉತ್ತರಪ್ರದೇಶದಲ್ಲಿ ಭೀಕರ ಅಪಘಾತ(Mirzapur Accident) ಸಂಭವಿಸಿದ್ದು,10 ಜನ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯರಾತ್ರಿ ಮಿರ್ಜಾಪುರ ಜಿಲ್ಲೆಯ ಪ್ರಯಾಗ್‌ರಾಜ್-ವಾರಣಾಸಿ ಹೆದ್ದಾರಿಯಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಭದೋಹಿಯಲ್ಲಿ ಮೇಲ್ಛಾವಣಿ ಕಾಮಗಾರಿ ಮುಗಿಸಿ ವಾರಣಾಸಿಯ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾಗ ಜಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಮಿರ್ಜಾಪುರ ಪೊಲೀಸ್ ವರಿಷ್ಠಾಧಿಕಾರಿ (SP), ಅಭಿನಂದನ್ ಮಾಹಿತಿ ನೀಡಿದ್ದಾರೆ. ಹೆದ್ದಾರಿಯಲ್ಲಿ ಕಚ್ವಾ ಬಳಿ ವೇಗವಾಗಿ ಬಂದ ಟ್ರಕ್ ಹಿಂದಿನಿಂದ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು. ಮೃತರೆಲ್ಲರೂ ವಾರಣಾಸಿಯ ಮಿರ್ಜಾಮುರಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳ ನಿವಾಸಿಗಳು ಎಂದು ಅವರು ಹೇಳಿದರು.

ಮೃತರನ್ನು ಭಾನು ಪ್ರತಾಪ್ (25), ವಿಕಾಸ್ ಕುಮಾರ್ (20), ಅನಿಲ್ ಕುಮಾರ್ (35), ಸೂರಜ್ ಕುಮಾರ್ (22), ಸನೋಹರ್ (25), ರಾಕೇಶ್ ಕುಮಾರ್ (25), ಪ್ರೇಮ್ ಕುಮಾರ್ (40), ರಾಹುಲ್ ಕುಮಾರ್ (26), ನಿತಿನ್ ಕುಮಾರ್ (22) ಮತ್ತು ರೋಷನ್ (27) ಮೃತರ ಗುರುತು ಇದುವರೆಗೆ ಪತ್ತೆಯಾಗಿಲ್ಲ. ಗಾಯಗೊಂಡವರನ್ನು ಆಕಾಶ್ (18), ಜಮುನಿ (26) ಮತ್ತು ಅಜಯ್ ಸರೋಜ್ (50) ಎಂದು ಗುರುತಿಸಲಾಗಿದೆ. ಗಾಯಾಳುಗಳು ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದ್ದು, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Train Accident: ಪೆಟ್ರೋಲಿಯಂ ಉತ್ಪನ್ನ ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿ ಪಲ್ಟಿ