Monday, 12th May 2025

ಸಚಿವ ಗಡ್ಕರಿಗೆ ಜೀವ ಬೆದರಿಕೆ ಕರೆ: ನಿವಾಸಕ್ಕೆ ಹೆಚ್ಚಿದ ಭದ್ರತೆ

ನಾಗ್ಪುರ: ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ.

ಬಳಿಕ ಪೊಲೀಸರು ಕಚೇರಿ ಹಾಗೂ ಗಡ್ಕರಿ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬೆದರಿಕೆ ಕರೆ ಬಂದಿದ್ದನ್ನು ನಿತಿನ್‌ ಗಡ್ಕರಿ ಕಚೇರಿ ದೃಢಪಡಿಸಿದೆ.

ನಾಗ್ಪುರದಲ್ಲಿರುವ ನಿತಿನ್‌ ಗಡ್ಕರಿ ಅವರ ಕಚೇರಿಗೆ ಶನಿವಾರ ಬೆಳಗ್ಗೆ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

‘ಅಪರಿಚಿತ ವ್ಯಕ್ತಿಗಳು ನಿತಿನ್‌ ಗಡ್ಕರಿ ಕಚೇರಿಗೆ ಅಪರಿಚಿತರು ಎರಡು ಬಾರಿ ಕರೆ ಮಾಡಿ, ಕೇಂದ್ರ ಸಚಿವರನ್ನು ಕೊಲ್ಲುತ್ತೇವೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ.