Monday, 12th May 2025

ಗಡಿಯೊಳಗೆ ಮದ್ದುಗುಂಡುಗಳ ರವಾನೆ: ಭಯೋತ್ಪಾದಕನ ಹತ್ಯೆ

ಜಮ್ಮು: ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತದ ಗಡಿಯೊಳಗೆ ಭಯೋತ್ಪಾದಕರಿಗೆ ಮದ್ದುಗುಂಡುಗಳ ರವಾನೆ ಮಾಡುತ್ತಿದ್ದ ಭಯೋತ್ಪಾದಕ ನೊಬ್ಬನನ್ನು ಎನ್ಕೌಂಟರ್‍ನಲ್ಲಿ ಸದೆಬಡಿಯಾಗಿದೆ.

ಜೈಲಿನಲ್ಲಿರುವ ಎಲ್​ಇಟಿ ಭಯೋತ್ಪಾದಕ ಬಾಯಿ ಬಿಟ್ಟ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದ ಭಧ್ರತಾ ಪಡೆಗಳು ಗಡಿ ತಲುಪಿ ಡ್ರೋನ್ ಹೊಡೆದುರುಳಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕು ಪತ್ತೆಯಾದ ಸ್ಥಳದಲ್ಲಿ ತಗೆದುಕೊಂಡು ಹೊಗಲು ಬಂದಿದ್ದ ಭಯೋತ್ಪಾ ದಕ ಮೊಹಮ್ಮದ್ ಅಲಿ ಹುಸೇನ್ ಅಲಿಯಾಸ್ ಖಾಸಿಮ್ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾನೆ.

ಶಸ್ತ್ರಾಸ್ತ್ರ ಪ್ಯಾಕೆಟ್ ಅನ್ನು ಬಾಂಬ್ ನಿಷ್ಕ್ರಿಯ ದಳ ತೆರೆದಿದ್ದು, ಅದರಲ್ಲಿ ಒಂದು ಎಕೆ ರೈಫಲï, 40 ಸುತ್ತುಗಳು, ಎರಡು ಪಿಸ್ತೂಲ್ 10 ಸುತ್ತುಗುಂಡು ಮತ್ತು ಎರಡು ಗ್ರೆನೇಡ್ ಪತ್ತೆಯಾಗಿದೆ.