Sunday, 11th May 2025

ಮೇಘಾಲಯ ಚುನಾವಣೆ: ಕೈ ಪಕ್ಷದ ಐವರು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ

ಶಿಲ್ಲಾಂಗ್: ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಪಕ್ಷದ ಐವರು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಝಾನಿಕಾ ಸಿಯಾಂಗ್ಷಿ (ಖಿಲಿಹ್ರಿಯಾತ್‌), ಅರ್ಬಿಯಾಂಗ್‌ಕಮ್‌ ಖರ್ ಸೋಹ್ಮತ್‌ (ಅಮ್ಲಾರೆಮ್‌), ಚಿರೆಂಗ್‌ ಪೀಟರ್‌ ಆರ್‌.ಮಾರಕ್‌ (ಖಾರ್‌ಕುತ್ತಾ), ಡಾ. ತ್ವೀಲ್‌ ಕೆ. ಮಾರಕ್‌ (ರೆಸುಬೆಲ್‌ಪಾರ) ಮತ್ತು ಕಾರ್ಲಾ ಆರ್‌. ಸಂಗ್ಮಾ (ರಾಜಾಬಾಲ) ಪಟ್ಟಿಯಲ್ಲಿರುವ ಐವರು.

60 ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ ಸ್ಪರ್ಧಿಸುವ 55 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಪಕ್ಷವು ಜನವರಿ 25ರಂದೇ ಪ್ರಕಟಿಸಿತ್ತು.

ಮೇಘಾಲಯ ವಿಧಾನಸಭೆಗೆ ಫೆಬ್ರುವರಿ 27ರಂದು ಚುನಾವಣೆ ನಿಗದಿಯಾಗಿದೆ. ಫೆಬ್ರವರಿ 7ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಾರ್ಚ್‌ 2 ರಂದು ಮತ ಎಣಿಕೆ ನಡೆಯಲಿದೆ.