Wednesday, 14th May 2025

ವೈದ್ಯಕೀಯ ವಿದ್ಯಾರ್ಥಿನಿಯ ಬೆಂಕಿ ಹಚ್ಚಿ ಹತ್ಯೆ

ಮುಂಬೈ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಸಹೋದರ, ತಂದೆಯೇ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.
ಆಕೆಯ ಪ್ರೇಮ ಪ್ರಕರಣವನ್ನು ವಿರೋಧಿಸಿ ಮನೆಯವರೇ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ಸಂಬಂಧ 5 ಮಂದಿಯನ್ನು ಬಂಧಿಸ ಲಾಗಿದೆ. ತೃತೀಯ ವರ್ಷದ ಹೋಮಿಯೋಪತಿ ಮೆಡಿಸಿನ್ ಮತ್ತು ಸರ್ಜರಿ ಪದವಿ (ಬಿಹೆಚ್‌ಎಂಎಸ್) ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತೆ ಶುಭಾಂಗಿ ಜೋಗ್ದಂಡ್ ವಿವಾಹ ನಿಶ್ಚಯವಾಗಿತ್ತು. ಆದರೆ ಆಕೆ ತಾನು ಯುವಕನೋರ್ವನನ್ನು ಪ್ರೇಮಿಸುತ್ತಿರುವುದಾಗಿ ಹೇಳಿದ್ದಳು ಇದರಿಂದ ಮದುವೆ ಮುರಿದುಬಿದ್ದಿತ್ತು.

ಪರಿಣಾಮ ಕುಟುಂಬ ಸದಸ್ಯರು ತೀವ್ರ ಅಸಮಾಧಾನಗೊಂಡಿದ್ದರು. ಮಹಿಳೆಯ ತಂದೆ, ಸಹೋದರ, ಹಾಗೂ ಕುಟುಂಬದ ಇನ್ನಿತರ ಸದಸ್ಯರು ಆಕೆಯನ್ನು ಜಮೀನಿಗೆ ಕರೆದೊಯ್ದು ಕೊರಳು ಬಿಗಿದು ಹತ್ಯೆ ಮಾಡಿ, ಆಕೆಯ ಶವವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು.