Thursday, 15th May 2025

ಜಾನುವಾರು ಸಾಗಣೆಗೆ ನಿಷೇಧ: ಅಕ್ಟೋಬರ್ 13ರವರೆಗೆ ಜಾರಿ

ಮುಂಬೈ : ಚರ್ಮ ರೋಗ ಹರಡುವಿಕೆ ತಡೆಯುವ ಸಲುವಾಗಿ ಮುಂಬೈ ಪೊಲೀಸರು ನಗರದಲ್ಲಿ ಜಾನುವಾರು ಸಾಗಣೆಯನ್ನು ನಿಷೇಧಿಸಿದ್ದಾರೆ.

ಮುಂಬೈ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರದೇಶ ವ್ಯಾಪ್ತಿಯಲ್ಲಿ ಅಕ್ಟೋಬರ್ 13ರವರೆಗೆ ಜಾರಿ ಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಜಾನುವಾರುಗಳನ್ನು ಮಾರುಕಟ್ಟೆ ಅಥವಾ ಪ್ರದರ್ಶನ ಕೇಂದ್ರಗಳಿಗೆ ಸಾಗಿಸುವುದು, ಮೇವು ಹುಲ್ಲು ಅಥವಾ ಉಪಕರಣಗಳ ಸಾಗಣೆಯನ್ನು ನಿಷೇಧಿಸಲಾಗಿದೆ. ಯಾರಾ ದರೂ ಆದೇಶ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸ ಲಾಗಿದೆ.

ಚರ್ಮ ರೋಗವು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಜಾನುವಾರುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ , ಜ್ವರ, ಚರ್ಮದ ಮೇಲೆ ಗಂಟುಗಳು ಮೂಡಿ ಸಾವಿಗೆ ಕಾರಣವಾಗಬಹುದು.

ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಎಂಟಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾವಿರಾರು ಜಾನುವಾರುಗಳು ರೋಗದಿಂದ ಮೃತಪಟ್ಟಿವೆ.