Wednesday, 14th May 2025

2023ರಲ್ಲಿ ಉತ್ತರಾಖಂಡದಲ್ಲಿ ಹಿಂದಿಯಲ್ಲೂ ವೈದ್ಯಕೀಯ ಶಿಕ್ಷಣ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್‌ ಜೊತೆಗೆ ಹಿಂದಿ ಯಲ್ಲೂ ಬೋಧಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಧನ್‌ ಸಿಂಗ್‌ ರಾವತ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಹಿಂದಿ ಭಾಷೆಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಿರುವ ಹಿನ್ನೆಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ಮೂಲಕ ಉತ್ತರಾಖಂಡವು ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಅಳವಡಿಸು ತ್ತಿರುವ ಎರಡನೇ ರಾಜ್ಯ ಎಂದೆನಿಸಿ ಕೊಳ್ಳಲಿದೆ. ಮಧ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಅಳವಡಿಸಿಕೊಂಡಿತು.

ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯು ನಾಲ್ವರು ತಜ್ಞರನ್ನು ಒಳಗೊಂಡ ಸಮಿತಿ ಯನ್ನು ರಚಿಸಲಾಗಿದೆ. ಈ ಸಮಿತಿಯು ಮಧ್ಯ ಪ್ರದೇಶದ ಸರ್ಕಾರಿ ಕಾಲೇಜುಗಳ ಎಂಬಿಬಿಎಸ್‌ ಹಿಂದಿ ಪಠ್ಯಗಳನ್ನು ಅಭ್ಯಸಿಸಿ, ಬಳಿಕ ಉತ್ತರಾಖಂಡದ ಎಂಬಿಬಿಎಸ್‌ ಹಿಂದಿ ಹೊಸ ಪಠ್ಯ ರಚನೆಯ ಡ್ರಾಫ್ಟ್‌ಅನ್ನು ತಯಾರಿಸಲಿದೆ ಎಂದು ರಾವತ್‌ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಕ್ಟೋಬರ್‌ 16ರಂದು ಎಂಬಿಬಿಎಸ್‌ನ ಮೂರು ಹಿಂದಿ ವಿಷಯಗಳ ಪಠ್ಯ ಪುಸ್ತಕ ಗಳನ್ನು ಬಿಡುಗಡೆ ಮಾಡಿದ್ದಾರೆ.