Sunday, 11th May 2025

‘ಮಯೋನೆಸ್’ ನಿಷೇಧಿಸಿದ ಕೇರಳ ಸರ್ಕಾರ

ತಿರುವನಂತಪುರಂ: ಮೊಟ್ಟೆ ಬಳಸಿ ಮಾಡುವ ‘ಮಯೋನೆಸ್’ ನ್ನು ನಿಷೇಧಿಸಿ ಕೇರಳ ಸರ್ಕಾರವು ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಆಹಾರ ವಿಷಪೂರಿತಗೊಂಡ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಕೇರಳ ಸರ್ಕಾರ ಎಲ್ಲಾ ಹೋಟೆಲ್‌ಗಳಲ್ಲಿ ಮೊಟ್ಟೆಯಿಂದ ತಯಾರಿಸಿದ ಮಯೋನೆಸ್ ನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವ ಹಸಿ ಮೊಟ್ಟೆಯ ಬಿಳಿ ಭಾಗವು ಹಳೆಯದಾದರೆ, ಅವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಉತ್ಪಾದಿಸಲು ಪ್ರಾರಂಭಿಸುತ್ತವೆ ಎಂದು ಹೇಳಿದರು.

ಎಲ್ಲಾ ಆಹಾರ ಪೊಟ್ಟಣಗಳ ಮೇಲೆ ಆಹಾರ ತಯಾರಿಸುವ ದಿನಾಂಕ ಮತ್ತು ವಿತರಣೆಯ ಸಮಯ ಮತ್ತು ಅದರ ಬಳಕೆ ಯೋಗ್ಯವಾದ ದಿನಾಂಕವನ್ನು ನಮೂದಿಸುವುದು ಕೂಡ ಕಡ್ಡಾಯವಾಗಿದೆ ಎಂದು ವರದಿ ತಿಳಿಸಿದೆ.