Tuesday, 13th May 2025

Tirupati Laddu : ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಹಾಕಿದ ಆರೋಪ; ಕೋರ್ಟ್‌ಗೆ ಹೋಗುವೆ ಎಂದ ಜಗನ್ ರೆಡ್ಡಿ

Tirupati Laddu

ನವದೆಹಲಿ: ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದವನ್ನು (Tirupati Laddu) ತಯಾರಿಸಲು ಬಳಸುವ ತುಪ್ಪದಲ್ಲಿ ಗೋಮಾಂಸ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು ಸೂಚಿಸುವ ಲ್ಯಾಬ್ ವರದಿಗಳು ಭಾರಿ ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿವೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವೈಎಸ್ಆರ್‌ಪಿ ಆಡಳಿತವು ಪವಿತ್ರ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದೆ ಎಂದು ಆರೋಪಿಸಿದ ಒಂದು ದಿನದ ನಂತರ ಈ ಗಲಾಟೆ ಶುರುವಾಗಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ವೈಎಸ್‌ಆರ್‌ಪಿ ಪಕ್ಷವು ಅವರ ವಿರುದ್ಧ ಕೋರ್ಟ್‌ಗೆ ಹೋಗುವುದಾಗಿ ಹೇಳಿದೆ.

ತಿರುಮಲ ತಿರುಪತಿ ದೇವಸ್ಥಾನಂ ನಲ್ಲಿ 500 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ರಾಜ್ಯ ವಿಚಕ್ಷಣಾ ಇಲಾಖೆ ಆರೋಪಿಸಿದೆ. ನಾಯ್ಡು ಅವರು ಮಾಡಿದ ಆಧಾರರಹಿತ ಆರೋಪಗಳ ಬಗ್ಗೆ ಆಡಳಿತಾರೂಢ ತೆಲುಗು ದೇಶಂ ಪಕ್ಷದ ವಿರುದ್ಧ ಕೋರ್ಟ್‌ ಮೆಟ್ಟಲು ಹತ್ತುವುದಾಗಿ ವೈಎಸ್‌ಆರ್‌ಪಿ ಹೇಳಿದೆ.

ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಇವು ಸಿಎಂ ಅವರ ಆಧಾರರಹಿತ ಆರೋಪಗಳು. ಅವರು ಅದನ್ನು ಸಾಬೀತುಪಡಿಸಲಿ. ಸಿಎಂ ಜನರ ಭಾವನೆಗಳನ್ನು ನೋಯಿಸಿದ್ದಾರೆ ಮತ್ತು ಅವರು ಹಿಂದೂಗಳನ್ನು ಅವಮಾನಿಸುತ್ತಿದ್ದಾರೆ ಎಂದು ವೈಎಸ್‌ಆರ್‌ಪಿ ವಕ್ತಾರ ನಾರಾಯಣನ್ ಮೂರ್ತಿ ಹೇಳಿದ್ದಾರೆ.

ಇದನ್ನೂಓದಿ: Tirupati Laddoo : ತಿರುಪತಿ ಲಡ್ಡುತಯಾರಿಕೆಗೆ ದನದ ಕೊಬ್ಬು ಬಳಕೆ; ಲ್ಯಾಬ್ ವರದಿಯಲ್ಲಿ ದೃಢ

ಬುಧವಾರ (ಸೆಪ್ಟೆಂಬರ್ 18) ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ, ಹಿಂದಿನ ಜಗನ್ ಆಡಳಿತವು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನೂ ಸಹ ಬಿಡಲಿಲ್ಲ. ಪ್ರಸಾದವನ್ನು ತಯಾರಿಸಲು ಕಳಪೆ ಗುಣಮಟ್ಟದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಒಂದು ದಿನದ ನಂತರ, ಪತ್ರಿಕಾಗೋಷ್ಠಿಯಲ್ಲಿ, ಟಿಟಿಡಿ ಒದಗಿಸಿದ ತುಪ್ಪದ ಮಾದರಿಗಳಲ್ಲಿ ಕಲಬೆರಕೆ ಆಗಿರುವುದನ್ನು ಗುಜರಾತ್ ಮೂಲದ  ಪ್ರಯೋಗಾಲಯವು ಹೇಳಿದೆ.

Leave a Reply

Your email address will not be published. Required fields are marked *