Wednesday, 14th May 2025

ಮನ್ ಕಿ ಬಾತ್’ಗೆ ಗೈರು: 36 ನರ್ಸಿಂಗ್ ವಿದ್ಯಾರ್ಥಿಗಳಿಗೆ ನಿರ್ಬಂಧ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 100ನೇ ಸಂಚಿಕೆ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಿಂದ ಹೊರಗುಳಿದ 36 ನರ್ಸಿಂಗ್ ವಿದ್ಯಾರ್ಥಿಗಳನ್ನು ಚಂಡೀ ಗಢದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಒಂದು ವಾರದವರೆಗೆ ಹಾಸ್ಟೆಲ್‌ ನಿಂದ ಹೊರಹೋಗದಂತೆ ನಿರ್ಬಂಧಿಸಿದೆ.

ಎಲ್ಲಾ ನರ್ಸಿಂಗ್ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಏಪ್ರಿಲ್ 30 ರಂದು ಮನ್ ಕಿ ಬಾತ್ ಭಾಷಣವನ್ನು ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಲಿಖಿತ ಆದೇಶವನ್ನು ಹೊರಡಿಸಿದ್ದರು.

ಆದರೆ ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಎಂಟು ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು ಮೋದಿ ಮನ್ ಕಿ ಬಾತ್ ಭಾಷಣ ಸೆಷನ್ ಗೆ ಹಾಜರಾಗಿರಲಿಲ್ಲ. ಅವರು ಹಾಜರಾಗದಿರಲು ಯಾವುದೇ ಕಾರಣವನ್ನು ನೀಡದ ಕಾರಣ ಒಂದು ವಾರದವರೆಗೆ ಹಾಸ್ಟೆಲ್‌ ನಿಂದ ಹೊರಹೋಗದಂತೆ ಸೂಚಿಸಿದ್ದಾರೆ.

“ಕೆಲವು ವಿದ್ಯಾರ್ಥಿಗಳು ಅಧಿವೇಶನಕ್ಕೆ ಹಾಜರಾಗದಿರಲು ಯಾವುದೇ ಕಾರಣವನ್ನು ಹಂಚಿಕೊಳ್ಳದ ಕಾರಣ ಮತ್ತು ಉಪನ್ಯಾಸ ಥಿಯೇಟರ್‌ ನಲ್ಲಿ ಅವರಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಿಂದ ದೂರವಿರುವು ದರಿಂದ, ಕಾಲೇಜು ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ” ಎಂದು ಪಿಜಿಐಎಂಇಆರ್ ಪ್ರಕಟಣೆಯಲ್ಲಿ ತಿಳಿಸಿದೆ.