Monday, 12th May 2025

ಹುಟ್ಟೂರಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ: ಭಗವಂತ ಮಾನ್

ಪಂಜಾಬ್: ನಾನು ರಾಜಭವನದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸು ವುದಿಲ್ಲ. ಬದಲಾಗಿ ಹುಟ್ಟೂರಾದ ಖಟ್ಕರ್ ಕಾಲನ್ ಗ್ರಾಮದಲ್ಲಿಯೇ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಎಎಪಿಯ ಪಂಜಾಬ್ ಸಿಎಂ ಅಭ್ಯರ್ಥಿ ಭಗವಂತ ಮಾನ್ ಘೋಷಿಸಿದ್ದಾರೆ.

ಪಂಜಾಬ್ ನಲ್ಲಿ ಎಎಪಿ ಗೆಲುವಿನ ನಗೆಯತ್ತಾ ದಾಪುಗಾಲು ಇಡುತ್ತಿರುವ ಸಂದರ್ಭದಲ್ಲಿ ಎಎಪಿ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಜೊತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಅಧಿಕಾರ ಸ್ವೀಕರಿಸುವುದಿಲ್ಲ. ಬದಲಾಗಿ, ಖತ್ಕರ್ ಕಾಲನ್ ನಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದರು.

ಸರ್ಕಾರಿ ಕಚೇರಿಯಲ್ಲಿ ಇನ್ಮುಂದೆ ಸಿಎಂ ಪೋಟೋ ಹಾಕಬಾರದು ಎಂಬುದಾಗಿ ಹೇಳಿದರು.