Wednesday, 14th May 2025

ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾಗೆ ಸಮನ್ಸ್

ವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ ಸಂಬಂಧ ವಿಚಾರಣೆಗಾಗಿ ದೆಹಲಿ ಉಪಮುಖ್ಯ ಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸೋಮವಾರ ದೆಹಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ.

ಆದರೆ ಸಮನ್ಸ್‌ ನೀಡಿರುವುದನ್ನು ಮನೀಶ್ ಸಿಸೋಡಿಯಾ ಅವರು ಸಮನ್ಸ್ ಅನ್ನು ಗುಜರಾತ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಲಿಂಕ್ ಮಾಡಿದ್ದಾರೆ.

ʻಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಗುಜರಾತ್‌ಗೆ ಹೋಗಬೇಕಾಗಿತ್ತು. ನಾನು ಗುಜರಾತ್‌ಗೆ ಹೋಗುವುದನ್ನು ತಡೆಯುವುದು ಅವರ ಉದ್ದೇಶವಾಗಿದೆ. ಗುಜರಾತ್‌ನಲ್ಲಿ ಸೋಲುತ್ತಿದೆ ಎಂದು ಬಿಜೆಪಿಗೆ ಗೊತ್ತಿರುವುದರಿಂದಲೇ ಅವರು ಕಂಗಾಲಾಗಿದ್ದಾರೆ ಎಂದು ಸಿಸೋಡಿಯಾ ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.