Tuesday, 13th May 2025

ಬಿಪೊರ್​ಜೋಯ್​ ಭೀಕರತೆ: ಮಂಡಿ ಜಿಲ್ಲೆಯಲ್ಲಿ ಮೇಘಸ್ಫೋಟ

ಮಂಡಿ: ಅರಬ್ಬೀ ಸಮುದ್ರದಲ್ಲಿ ಬಿಪೊರ್​ಜೋಯ್​ ಚಂಡಮಾರುತ ಭೀಕರತೆ ಪಡೆಯುತ್ತಿದ್ದರೆ, ಇತ್ತ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಮೇಘಸ್ಫೋಟ ಸಂಭವಿಸಿದೆ.

ಮೇಘಸ್ಫೋಟದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಡೋಗ್ರಿ, ಕಾರ್ಲಾ ಮತ್ತು ಹಡಬೋಯಿ ಗ್ರಾಮಗಳಲ್ಲಿ ಕೃಷಿ ಭೂಮಿ ಕೊಚ್ಚಿಕೊಂಡು ಹೋಗಿದೆ. ಆಪತ್ತಿನಲ್ಲಿ ಸಿಕ್ಕಿದ್ದ 40 ಜನರನ್ನು ಇದೇ ವೇಳೆ ರಕ್ಷಣೆ ಮಾಡಲಾಗಿದೆ.

ಮಂಡಿ ಜಿಲ್ಲೆಯ ಧನಾಯರ ಗ್ರಾಮ ಪಂಚಾಯಿತಿಯಲ್ಲಿ ಮೇಘಸ್ಫೋಟದಿಂದಾಗಿ ಎರಡು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೆಲವು ವಾಹನಗಳನ್ನು ಕಠಿಣ ಪರಿಶ್ರಮದ ನಂತರ ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯ ಲಾಯಿತು.

ಗ್ರಾಮಸ್ಥರಿಗೆ ಸೇರಿದ ಹಲವಾರು ಕೃಷಿ ಜಮೀನು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. 2 ವಾಹನಗಳು ಸೇರಿದಂತೆ 3 ವ್ಯಾಪಾರಿಗಳು ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ್ದ 40 ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದ ಎಲ್ಲ ಸಂಪರ್ಕ ಮಾರ್ಗಗಳು ಕಡಿತಗೊಂಡಿವೆ. ಏಕಾಏಕಿ ಘಟನೆ ಸಂಭವಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಕಷ್ಟು ತೊಂದರೆ ಉಂಟಾಗಿದ್ದು, ನಷ್ಟದ ಅಂದಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.