Monday, 12th May 2025

ನರೇಂದ್ರ ಮೋದಿ ನವ ಭಾರತದ ಪಿತಾಮಹ: ಅಮೃತಾ ಫಡ್ನವೀಸ್

ಮುಂಬೈ: ಭಾರತ, ಇಬ್ಬರು ರಾಷ್ಟ್ರಪಿತರನ್ನು ಹೊಂದಿದ್ದು, ಮಹಾತ್ಮ ಗಾಂಧಿ ರಾಷ್ಟ್ರದ ಮೊದಲ ಪಿತಾಮಹರಾದರೆ ಪ್ರಧಾನಿ ನರೇಂದ್ರ ಮೋದಿ ನವ ಭಾರತದ ಪಿತಾಮಹ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಬಣ್ಣಿಸಿದ್ದಾರೆ.

ಅಣಕು ನ್ಯಾಯಾಲಯ ಸಂದರ್ಶನ ಒಂದರಲ್ಲಿ ಮಾತುಗಳನ್ನು ಹೇಳಿದ್ದು, ಈ ವೇಳೆ ನರೇಂದ್ರ ಮೋದಿ ರಾಷ್ಟ್ರಪಿತರಾದರೆ ಮಹಾತ್ಮ ಗಾಂಧಿ ಯಾರು ಎಂಬ ಪ್ರಶ್ನೆ ಕೇಳಲಾಯಿತು. ಉತ್ತರಿಸಿದ ಅಮೃತಾ ಫಡ್ನವೀಸ್, ಅವರು ರಾಷ್ಟ್ರದ ಮೊದಲ ರಾಷ್ಟ್ರಪಿತ ಎಂದು ಹೇಳಿದರು.

ಅಮೃತ ಫಡ್ನವೀಸ್ ಅವರ ಹೇಳಿಕೆಗೆ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದು, ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ಮಹಾತ್ಮ ಗಾಂಧಿ ಅವರನ್ನು ಹಿನ್ನೆಲೆಗೆ ತಳ್ಳುತ್ತಾ ಇತಿಹಾಸ ಬದಲಾಯಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read E-Paper click here