Wednesday, 14th May 2025

ಕಂದಕಕ್ಕೆ ಉರುಳಿದ ಬಸ್: ಮಹಿಳೆ ಸಾವು, 24 ಮಂದಿಗೆ ಗಾಯ

ಹಾರಾಷ್ಟ್ರ: ಮದುವೆ ಮನೆಯ ಅತಿಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದು ಮಹಿಳೆ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.

ಸುಂಧಾ ಹರಿದಾಸ್ ಮಾಧವಿ ಮೃತ ಮಹಿಳೆ. ಮದುವೆ ಮನೆಯ 60 ಅತಿಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ನಂದಗಾಂವ್‌ ನಿಂದ ರಾಜೂರಾಗೆ ಹಿಂತಿರುಗುತ್ತಿದ್ದಾಗ ಬಲ್ಲಾರ್‌ಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಮಹಿಳೆ ಮೃತಪಟ್ಟಿದ್ದು, ಒಟ್ಟು 24 ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.