Monday, 12th May 2025

Maharashtra Curfew: ಸಚಿವರ ಕಾರು ಚಾಲಕ ಹಾಗೂ ಗ್ರಾಮಸ್ಥರ ನಡುವೆ ಫೈಟ್‌; ಇಡೀ ಹಳ್ಳಿಯಲ್ಲಿ ಕರ್ಫ್ಯೂ!

Maharashtra Curfew

ಮುಂಬೈ: ಮಹಾರಾಷ್ಟ್ರದ ಸಚಿವ ಗುಲಾಬರಾವ್ ಪಾಟೀಲ್ (Gulabrao Patil) ಅವರ ಕಾರಿನ ಚಾಲಕ ಹಾಗೂ ಕಸಾಯಿವಾಡ ಗ್ರಾಮದ ಸ್ಥಳೀಯ ಗುಂಪಿನ ನಡುವೆ ಮಂಗಳವಾರ ಕ್ಷುಲಕ್ಕ ಕಾರಣಕ್ಕೆ ನಡೆದ ವಾದ ವಿವಾದ ಹಿಂಸಾಚಾರಕ್ಕೆ ತಿರುಗಿತು. ಪಾಲ್ತಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ಬೆಳಗ್ಗೆ ತಿಳಿಸಿದ್ದಾರೆ (Maharashtra Curfew).

ಪಾಲ್ತಿ ಗ್ರಾಮದ ಕಸಾಯಿವಾಡ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಮೂಲ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆಯಾದರೂ ಬುಧವಾರ ಬೆಳಗಿನ ಜಾವದವರೆಗೂ ಹಿಂಸಾಚಾರದ ಘಟನೆಗಳು ವರದಿಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಉಪ ಅಧೀಕ್ಷಕಿ ಕವಿತಾ ನೇರ್ಕರ್ ಪೊಲೀಸರು ಧರಂಗಾವ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಗಲಭೆ ಎಸಗಿದ ಅಪರಾಧವನ್ನು ದಾಖಲಿಸಿದ್ದಾರೆ ಮತ್ತು 20-25 ಜನರನ್ನು ಬಂಧಿಸಿದ್ದಾರೆ. ಮೇಲಾಗಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಮಂಗಳವಾರ ತಡರಾತ್ರಿ ಗ್ರಾಮದ ಕಸಾಯಿವಾಡ ಪ್ರದೇಶದಲ್ಲಿ ಸಚಿವ ಗುಲಾಬರಾವ್ ಪಾಟೀಲ್ ಅವರ ಕಾರಿನ ಚಾಲಕ ಹಾಗೂ ಚಾಲಕ ಹಾರ್ನ್ ಮಾಡಿ ದಾರಿ ಮಾಡಿಕೊಡುವಂತೆ ಕೇಳಿದಾಗ ಸ್ಥಳೀಯರ ಗುಂಪು ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಶಿವಸೇನೆ ಮುಖಂಡ ಹಾಗೂ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆ ಸಚಿವ ಪಾಟೀಲ್ ಅವರು ಹಾಜರಿರಲಿಲ್ಲ. ಆದರೆ ಅವರ ಕುಟುಂಬದ ಸದಸ್ಯರು ಕಾರಿನಲ್ಲಿ ಇದ್ದರು ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ : Rashmi Shukla: ಮಹಾರಾಷ್ಟ್ರ ಡಿಜಿಪಿಯಾಗಿ ರಶ್ಮಿ ಶುಕ್ಲಾ ಮರು ನೇಮಕ