ಲಖನೌ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್ ರಾಜ್‌ನಲ್ಲಿ ಮುಂಬರುವ 13 ಜನವರಿ ಮತ್ತು 26 ರ ನಡುವೆ ಮಹಾಕುಂಭ ಮೇಳವನ್ನು (Maha Kumbh Mela) ಆಯೋಜಿಸಲಾಗಿದೆ. ದೇಶದಾದ್ಯಂತ ಹಿಂದೂ ಸಂಸೃತಿಯನ್ನು ಪಸರಿಸಲು ಕುಂಭ ಮೇಳದಲ್ಲಿ ತಿರುಪತಿ ತಿರಮಲ ದೇವಸ್ಥಾನದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಕೃತಿ ಮಾದರಿ ಸ್ಥಾಪಿಸಲು ತಿರುಪತಿ ತಿರುಮಲ (Tirupati Tirumala) ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.
ಈ ಸಂಬಂಧ ಟಿಟಿಡಿಯ ಜಂಟಿ ನಿರ್ವಾಹಕ ಅಧಿಕಾರಿ ಗೌತಮಿ ಅವರು ಕುಂಭಮೇಳ ಪ್ರಾಧಿಕಾರದ ಅಧಿಕಾರಿ ವಿಜಯ್ ಕಿರಣ್ ಆನಂದ್ ಅವರನ್ನು ಶನಿವಾರ ಪ್ರಯಾಗರಾಜ್‌ನಲ್ಲಿ ಔಪಚಾರಿಕವಾಗಿ ಭೇಟಿ ಮಾಡಿದರು. ಈಗಾಗಲೇ ಸಕಲ ಸಿದ್ದತೆಗಳನ್ನು ನಡೆಸಿದ್ದು, ಕುಂಭಮೇಳದ ಅಧಿಕಾರಿಗಳು ಶ್ರೀ ವೆಂಕಟೇಶ್ವರ ಸ್ವಾಮಿಯ ಪ್ರತಿಕೃತಿ ದೇವಸ್ಥಾನವನ್ನು ಸ್ಥಾಪಿಸಲು ಟಿಟಿಡಿಗೆ ಆರನೇ ಸೆಕ್ಟರ್‌ನಲ್ಲಿ 2.5 ಎಕರೆ ಜಾಗವನ್ನು ಮಂಜೂರು ಮಾಡಿದ್ದಾರೆ.
ಮಂಜೂರು ಮಾಡಿದ ಜಾಗದ ಪರಿಶೀಲನೆ ನಡೆಸಿದ ಜೆಇಒ ಗೌತಮಿ, ಧಾರ್ಮಿಕ ಕಾರ್ಯಕ್ರಮಕ್ಕೆ ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಟಿಟಿಡಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ದೇವಾಲಯಗಳ ಸಂಸೃತಿಯ ಬಗ್ಗೆ ಉತ್ತರ ಭಾರತಕ್ಕೆ ಪರಿಚಯಿಸುವ ಗುರಿಯನ್ನು ಟಿಟಿಡಿ ಹೊಂದಿದೆ.
ದೇಶದಾದ್ಯಂತ ಪ್ರತಿಕೃತಿಗಳ ನಿರ್ಮಾಣ ಯೋಜನೆ
ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಹಲವು ಕಡೆಗಳಿಂದ ದೇವರ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ಟಿಟಿಡಿ ದೇವಾಲಯದ ಟ್ರಸ್ಟ್, ಭಾರತದ ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ದೇವಾಲಯದ ಪ್ರತಿಕೃತಿ ನಿರ್ಮಾಣ ಕಾರ್ಯದ ಯೋಜನೆಯನ್ನು ಪ್ರಾರಂಭಿಸಿದ್ದು, ಸದ್ಯ ಚೆನ್ನೈ, ಕನ್ಯಾಕುಮಾರಿ, ದೆಹಲಿ, ಭುವನೇಶ್ವರ್ ಮತ್ತು ದೆಹಲಿಯಲ್ಲಿ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಉತ್ತರ ಪ್ರದೇಶ ಸರ್ಕಾರ ಮಹಾಕುಂಭ ಮೇಳಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದು, ಕುಂಭ ಮೇಳ ನಡೆಯುವ ಸ್ಥಳವನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡಿದೆ. ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಪ್ರಯಾಗ್‌ರಾಜ್ ರವೀಂದ್ರ ಕುಮಾರ್ ಮಂದರ್ ಭಾನುವಾರ ಸಂಜೆ ಅಧಿಸೂಚನೆ ಹೊರಡಿಸಿದ್ದಾರೆ.
The Uttar Pradesh government has declared the Maha Kumbh area of Prayagraj as a new district. Which will be known as Maha Kumbh Mela district. This new district has been formed to smoothly manage the special event of Kumbh Mela and conduct administrative work in a better… pic.twitter.com/RkeA20pMfK
— ANI (@ANI) December 1, 2024
ಈ ಸುದ್ದಿಯನ್ನೂ ಓದಿ : Maha Kumbh Mela: ಮಹಾಕುಂಭ ಮೇಳ ನಡೆಯುವ ಪ್ರದೇಶ ಇನ್ಮುಂದೆ ಹೊಸ ಜಿಲ್ಲೆ; ಉತ್ತರ ಪ್ರದೇಶ ಸರ್ಕಾರದಿಂದ ಮಹತ್ವದ ಘೋಷಣೆ