ಪಾಲಕ್ಕಾಡ್: ಅಕ್ಕಿಯನ್ನು (Rice) ತೊಳೆದು, ಕುಡಿಯುವ ನೀರಿನಲ್ಲಿ ಹಾಕಿ ಬೇಯಿಸುವುದು ವಾಡಿಕೆ. ಆದರೆ ಇಲ್ಲಿ ಈ ಅಕ್ಕಿಯನ್ನು ಬೇಯಿಸಬೇಕಿಲ್ಲ. ನೀರಿನಲ್ಲಿ ಕೇವಲ 15 ನಿಮಿಷ ಕಾಲ ನೆನೆಸಿಟ್ಟರೆ ಸಾಕು ತಿನ್ನಲು ಸಿದ್ದವಾಗುತ್ತದೆ. ಈ ಮ್ಯಾಜಿಕ್ ರೈಸ್ (Magic Rice) ಅಸ್ಸಾಂನ ಪಶ್ಚಿಮ ಪ್ರದೇಶದಲ್ಲಿ (Western region of Assam) ಈಗ ಸಿದ್ಧವಾಗಿದೆ.
ಕುದಿಯುವ ನೀರಿಲ್ಲದೆ ಬೇಯುವ ವಿಶಿಷ್ಟ ಸಾಮರ್ಥ್ಯವಿರುವ ‘ಮ್ಯಾಜಿಕ್ ರೈಸ್’ ಎಂದು ಕರೆಯಲ್ಪಡುವ ಅಗೋನಿಬೋರ ಅಕ್ಕಿಯನ್ನು (Agonibora rice) ಅಸ್ಸಾಂನ ಪಶ್ಚಿಮ ಪ್ರದೇಶದಲ್ಲಿ ಸಿದ್ಧಪಡಿಸಲಾಗಿದೆ. ಕೇವಲ 30- 45 ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿ ಬೇಯಿಸಬಹುದಾದ ಈ ಅಕ್ಕಿ ಪಾಲಕ್ಕಾಡ್‌ನಲ್ಲಿರುವ ಎಲಾಪುಲ್ಲಿಯಲ್ಲಿರುವ ಅಥಾಚಿ ಗ್ರೂಪ್‌ನ ಫಾರ್ಮ್‌ನಲ್ಲಿ (Elapulli Athachi Group Farm) ಸಿದ್ದಗೊಂಡಿದೆ.
ಈ ಅಕ್ಕಿಯನ್ನು ಬೇಯಿಸಲು ಯಾವುದೇ ಶಾಖದ ಅಗತ್ಯವಿಲ್ಲ. ತಣ್ಣೀರು ಅಥವಾ ಬಿಸಿ ನೀರಿನಲ್ಲಿ ಕೇವಲ 15 ನಿಮಿಷಗಳ ಕಾಲ ನೆನೆಸಿದರೆ ಅರ್ಧ ಗಂಟೆಯಲ್ಲಿ ಅನ್ನ ಸಿದ್ಧವಾಗುತ್ತದೆ.
ಅಥಾಚಿ ಗ್ರೂಪ್‌ನ ಅಧ್ಯಕ್ಷ ರಾಜು ಸುಬ್ರಮಣಿಯನ್, ಉಪಾಧ್ಯಕ್ಷೆ ದೀಪಾ ಸುಬ್ರಮಣಿಯನ್ ಮತ್ತು ಎಂಡಿ ವಿಶ್ವನಾಥನ್ ಪ್ರಕಾರ ಪಾಲಕ್ಕಾಡ್‌ನ ಹವಾಮಾನದಲ್ಲಿ ಇದನ್ನು ಬೆಳೆಸಲಾಗಿದೆ.

ಜೂನ್‌ನಲ್ಲಿ ಇದರ ಕೃಷಿ ಆರಂಭಗೊಂಡಿದ್ದು, ಇತ್ತೀಚೆಗೆ ಕಟಾವು ಪೂರ್ಣಗೊಂಡಿದೆ. ಬೀಜಗಳನ್ನು ಅಸ್ಸಾಂನಿಂದ ಆಮದು ಮಾಡಿಕೊಳ್ಳಲಾಯಿತು. ಸಾವಯವ ಕೃಷಿ ವಿಧಾನಗಳನ್ನು ಬಳಸಿಕೊಂಡು 12 ಸೆಂಟ್ಸ್ ಭೂಮಿಯಲ್ಲಿ ನೆಡಲಾಯಿತು.
ಉಳುಮೆ ಮಾಡಿದ ಮಣ್ಣಿಗೆ ಪಂಚಗವ್ಯ ಅಂದರೆ ಸಾಂಪ್ರದಾಯಿಕ ಸಾವಯವ ಗೊಬ್ಬರ ಹಾಕಿದ ಅನಂತರ ಬೀಜಗಳು ಮೊಳಕೆಯೊಡೆದು 20 ದಿನಗಳ ಬಳಿಕ ನೆಡಲಾಯಿತು. ಸಣ್ಣಪುಟ್ಟ ಕೀಟ ಸಮಸ್ಯೆಗಳ ಹೊರತಾಗಿಯೂ ಬೇವಿನ ಎಣ್ಣೆಯಂತಹ ಸಾವಯವ ಕೀಟನಾಶಕಗಳ ಬಳಕೆಯು ಬೆಳೆಯನ್ನು ರಕ್ಷಿಸಲು ಸಹಾಯ ಮಾಡಿತು. ಭತ್ತದ ಗಿಡಗಳು ಸುಮಾರು ಮೂರು ಅಡಿ ಎತ್ತರಕ್ಕೆ ಬೆಳೆದು 100-110 ದಿನಗಳಲ್ಲಿ ಫಸಲು ಕೊಟ್ಟಿದೆ. 12 ಸೆಂಟ್ಸ್ ನಲ್ಲಿ 170 ಕಿ.ಗ್ರಾಂ. ಅಗೋನಿಬೋರ ಭತ್ತವನ್ನು ಕಟಾವು ಮಾಡಲಾಗಿದೆ.
ಈ ಅಕ್ಕಿಯನ್ನು ತುರ್ತು ಸಂದರ್ಭಗಳಲ್ಲಿ ಅಥವಾ ವಿಪತ್ತಿನ ಸಂದರ್ಭಗಳಲ್ಲಿ ಬಳಕೆ ಮಾಡಬಹುದು. ಯಾಕೆಂದರೆ ಇದನ್ನು ಶಾಖವಿಲ್ಲದೆ ಬೇಯಿಸಬಹುದು. ಈ ಪ್ರಯೋಗದ ಯಶಸ್ಸಿನ ಅನಂತರ ಫಾರ್ಮ್ ಕೃಷಿಯನ್ನು ವಿಸ್ತರಿಸಲು ಮತ್ತು ಮುಂಬರುವ ಋತುವಿನಲ್ಲಿ ಅಕ್ಕಿಯನ್ನು ಮಾರುಕಟ್ಟೆಗೆ ತರಲು ಯೋಜಿಸಲಾಗಿದೆ.
Interest Rate: ಫೆಬ್ರವರಿಯಲ್ಲಿ ನಿಮ್ಮ ಗೃಹ ಸಾಲ ಬಡ್ಡಿ ಇಳಿಕೆ? ಆರ್‌ಬಿಐನಿಂದ ಸಿಆರ್‌ಆರ್ ಕಟ್
ರೈಸ್ ಮ್ಯೂಸಿಯಂನಲ್ಲಿದೆ 37 ವಿಧದ ಅಕ್ಕಿ
ಅಗೊನಿಬೊರಾ ಜೊತೆಗೆ ಅಥಾಚಿ ಗ್ರೂಪ್‌ನ ಫಾರ್ಮ್ ಭಾರತದಾದ್ಯಂತ ಮತ್ತು ಮಣಿಪುರದ ಕಪ್ಪು ಅಕ್ಕಿ, ಅಸ್ಸಾಂನ ಜೋಹಾ, ಥೈಲ್ಯಾಂಡ್‌ನ ಜಾಸ್ಮಿನ್ ರೈಸ್ ಮತ್ತು ಹಲವಾರು ಸಾಂಪ್ರದಾಯಿಕ ಕೇರಳದ ತಳಿಗಳನ್ನು ಒಳಗೊಂಡಂತೆ 37 ವಿಧದ ಭತ್ತವನ್ನು ಸಹ ಬೆಳೆಸಿದೆ. ಈ ಭತ್ತದ ಪ್ರಭೇದಗಳನ್ನು ಫಾರ್ಮ್‌ನ “ರೈಸ್ ಮ್ಯೂಸಿಯಂ”ನಲ್ಲಿ ಸಂರಕ್ಷಿಸಲಾಗಿದೆ.