Monday, 12th May 2025

ಆರೋಪಿಗೆ ಕರಪತ್ರ ಹಂಚುವ ಶಿಕ್ಷೆ ನೀಡಿದ ಮದ್ರಾಸ್ ಹೈಕೋರ್ಟ್..!

ಚೆನ್ನೈ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಮೂವರು ಪಾದಚಾರಿಗಳ ಗಾಯ ಗೊಳಿಸಿದ್ದ ಆರೋಪಿ ಯುವಕನಿಗೆ ಮದ್ರಾಸ್ ಹೈಕೋರ್ಟ್ ವಿಶೇಷ ಶಿಕ್ಷೆ ನೀಡಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ನ್ಯಾಯಾಲಯ ಆತನಿಗೆ ಎರಡು ವಾರಗಳ ಕಾಲ ನಗರದ ಜನನಿಬಿಢ ಜಂಕ್ಷನ್‌ನಲ್ಲಿ ಕುಡಿದು ವಾಹನ ಚಲಾಯಿಸುವುದರ ವಿರುದ್ಧ ಕರಪತ್ರಗಳನ್ನು ಹಂಚಬೇಕು ಎಂದು ನ್ಯಾ.ಎ ಡಿ ಜಗದೀಶ್ ಚಂದ್ರ ಆದೇಶ ನೀಡಿದ್ದಾರೆ.

25 ಸಾವಿರ ರೂಪಾಯಿ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ನೀಡಿದ ಮೇಲೆ ಜಾಮೀನು ನೀಡಲಾಗುತ್ತದೆ ಎಂದು ಸೈದಾಪೇಟ್​ IV ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾ ಧೀಶರು ಹೇಳಿದ್ದಾರೆ.

ಜಾಮೀನು ವಿರೋಧಿಸಿದ ಪ್ರತಿವಾದಿ ವಕೀಲರು ಆರೋಪಿಯು ಕುಡಿದ ಅಮಲಿನಲ್ಲಿ ವಾಹನವನ್ನು ನಿರ್ಲಕ್ಷ್ಯದ ರೀತಿಯಲ್ಲಿ ಚಾಲನೆ ಮಾಡಿ ಪಾದಚಾರಿಗಳಿಗೆ ಗಾಯಗೊಳಿಸಿ ದ್ದಾನೆ ಎಂದು ವಾದಿಸಿದರು. ಆದರೆ ಗಾಯಗೊಂಡ ಪಾದಚಾರಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರಿಂದ ನ್ಯಾಯಾಧೀಶರು ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ.

ಯುವಕ ಎರಡು ವಾರಗಳ ಕಾಲ ಅಡ್ಯಾರ್ ಪೊಲೀಸ್ ಠಾಣೆಗೆ ಹಾಜರಾಗಬೇಕು. ಬೆಳಿಗ್ಗೆ 9-10 ಮತ್ತು ಸಂಜೆ 5-7 ರವರೆಗೆ ಕರಪತ್ರ ಹಂಚಬೇಕು. ಅಗತ್ಯವಿದ್ದಾಗ ಪೊಲೀಸರಗೆ ವರದಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.