Sunday, 11th May 2025

ದೇವಸ್ಥಾನದ ಗರ್ಭಗುಡಿಗೆ ಲಘು ವಿಮಾನ ಡಿಕ್ಕಿ

ಭೋಪಾಲ್: ಮಧ್ಯಪ್ರದೇಶದ ರೇವಾ ಎಂಬಲ್ಲಿ ತರಬೇತಿ ವೇಳೆ ಲಘು ವಿಮಾನ ದೇವಸ್ಥಾನದ ಮೇಲಿನ ಗರ್ಭಗುಡಿಗೆ ಡಿಕ್ಕಿ ಹೊಡೆದು ಪತನಗೊಂಡಿದ್ದು, ಈ ಸಂದರ್ಭ ದಲ್ಲಿ ಹಿರಿಯ ಪೈಲಟ್ ದುರ್ಮರಣಕ್ಕೀಡಾಗಿದೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯ ಡುಮ್ರಿ ಗ್ರಾಮದಲ್ಲಿರುವ ದೇವಸ್ಥಾನದ ಗರ್ಭಗುಡಿಯ ಶಿಖರಕ್ಕೆ ಡಿಕ್ಕಿ ಹೊಡೆದು ಖಾಸಗಿ ಲಘು ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ ತರಬೇತಿ ಪಡೆಯುತ್ತಿದ್ದ ಪೈಲಟ್ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.

ಶುಕ್ರವಾರ ಅವಘಡ ಸಂಭವಿಸಿದೆ. ಲಘು ವಿಮಾನ ದೇವಸ್ಥಾನದ ಗರ್ಭಗುಡಿಗೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ಗಾಯಗೊಂಡ ತರಬೇತು ಪೈಲಟ್ ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾ ಗುತ್ತಿದೆ ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ತಿಳಿಸಿದ್ದಾರೆ.

Read E-Paper click here