Monday, 12th May 2025

ಸೆಬಿ ಮುಖ್ಯಸ್ಥರಾಗಿ ಮಾಧಬಿ ಪುರಿ ಬುಚ್ ನೇಮಕ

ನವದೆಹಲಿ: ಮಾಧಬಿ ಪುರಿ ಬುಚ್ ಅವರನ್ನು ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ಮುಖ್ಯಸ್ಥರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಸದ್ಯದ ಸೆಬಿ ಮುಖ್ಯಸ್ಥರಾಗಿದ್ದ ಅಜಯ್ ತ್ಯಾಗಿ ಅವರ ಅಧಿಕಾರಾವಧಿ ಇಂದಿಗೆ ಕೊನೆಯಾಗಿದ್ದು, ಮೂರು ವರ್ಷದ ಅವಧಿಗೆ ಮಹಿಳೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥೆಯಾಗ ಲಿದ್ದಾರೆ ಎಂದು ಹಣಕಾಸು ಸಚಿವಾಲಯ ಮೂಲಗಳು ಸ್ಪಷ್ಟಪಡಿಸಿವೆ.

ಮಾಧಬಿ ಅವರು ಸೆಬಿಯ ಮಾಜಿ ಪೂರ್ಣವಧಿಯ ಸದಸ್ಯರಾಗಿದ್ದು, ಮಾರುಕಟ್ಟೆ ನಿಯಂತ್ರಕದಿಂದ ಸ್ಥಾಪಿಸಲಾದ ಹೊಸ ತಂತ್ರಜ್ಞಾನ ಸಮಿತಿಯನ್ನು ಮುನ್ನಡೆಸಲು ಹಿಂದೆ ನಾಮನಿರ್ದೇಶನ ಮಾಡ ಲಾಗಿತ್ತು.

ಐಸಿಸಿ ಬ್ಯಾಂಕ್ ಮೂಲಕ ವೃತ್ತಿ ಜೀವನ ಆರಂಭಿಸಿದ ಬುಚ್, ಐಸಿಸಿಐ ಸೆಕ್ಯುರಿಟೀಸ್ ನ ಎಂಡಿ ಮತ್ತು ಸಿಇಒ ಆಗಿ ಫೆಬ್ರವರಿ 2009 ರಿಂದ ಮೇ 2011 ರವರೆಗೂ ಸೇವೆ ಸಲ್ಲಿಸಿದ್ದಾರೆ.