ಕೊಚ್ಚಿ: ಉದ್ಯಮಿ ಎಂ.ಎ.ಯೂಸುಫ್ ಅಲಿ ಹಾಗೂ ಇತರ ನಾಲ್ಕು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಕೇರಳದ ಕೊಚ್ಚಿ ನಗರದಲ್ಲಿ ಭಾನುವಾರ ತುರ್ತು ಲ್ಯಾಂಡಿಂಗ್ ಆಗಿದೆ.
ಎಲ್ಲ ಐವರು ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಗಾಯ ಇಲ್ಲವೇ ಹೆಚ್ಚಿನ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಯೂಸುಫ್ ಅಲಿ ಹಾಗೂ ಅವರ ಪತ್ನಿ ಸುರಕ್ಷಿತವಾಗಿದ್ದಾರೆ.
ತಪಾಸಣೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.