Sunday, 11th May 2025

LPG Price Hike : ಗ್ರಾಹಕರಿಗೆ ಬಿಗ್‌ ಶಾಕ್‌ ! ಗ್ಯಾಸ್‌ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ

LPG Price Hike

ನವದೆಹಲಿ: ಡಿಸೆಂಬರ್‌ ತಿಂಗಳಿನ ಮೊದಲನೇ ದಿನವೇ ಗ್ರಾಹಕರಿಗೆ ಬಿಗ್‌ ಶಾಕ್‌ ಕಾದಿದೆ. ಇಂದಿನಿಂದ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ (commercial gas cylinder) ಬೆಲೆ (LPG Price Hike) ಹೆಚ್ಚಾಗಿದ್ದು,  ಗ್ರಾಹಕರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಇಂದಿನಿಂದ ಇಂಡಿಯನ್ ಆಯಿಲ್ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 16.50 ರೂ.ಗಳಷ್ಟು ಹೆಚ್ಚಿಸಿದ್ದು, ಇನ್ನು ಮುಂದೆ ದೆಹಲಿಯಲ್ಲಿ 1818.50 ರೂ.ಗೆ ಸಿಲಿಂಡರ್‌ ಲಭ್ಯವಾಗಲಿದೆ.

ದೆಹಲಿಯಲ್ಲಿ ಡಿಸೆಂಬರ್‌ 1 ರಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ 1818.50 ರೂ. ಕೋಲ್ಕತ್ತಾದಲ್ಲಿ 1927 ರೂ. ಹಾಗೂ ಮುಂಬೈನಲ್ಲಿ 1754 ರೂ ಗೆ ದೊರೆಯುತ್ತಿದ್ದ ಸಿಲಿಂಡರ್‌ ಇದೀಗ 1771 ರೂ ಗೆ ಲಭ್ಯವಾಗಲಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡಡ್‌ಗಳ ಬೆಲೆ ಯಥಾಸ್ಥಿತಿಯಲ್ಲಿರುವುದರಿಂದ ಗ್ರಾಹಕ ಕೊಂಚ ನಿರಳಾವಾಗಿದ್ದಾನೆ. ಗೃಹ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಲಿಲ್ಲ. ದೆಹಲಿಯಲ್ಲಿ 803 ರೂ. ಗೆ ಮಾರಾಟವಾಗುತ್ತಿದ್ದರೆ. ಕೊಲ್ಕತ್ತಾದಲ್ಲಿ 829 ರೂ. ಮುಂಬೈನಲ್ಲಿ 802.50 ರೂ ಗೆ ಲಭ್ಯವಾಗುತ್ತಿದೆ.

ವಾಣಿಜ್ಯ ಸಿಲಿಂಡರ್‌ ಬೆಲೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ ಆರ್ಥಿಕ ಹೊರೆಯನ್ನು ಉಂಟು ಮಾಡಿದೆ. ನವರಾತ್ರಿ ಸಮಯದಲ್ಲೂ ಸಿಲಿಂಡರ್‌ ಬೆಲೆ ಹೆಚ್ಚಳವಾಗಿತ್ತು. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂಪಾಯಿ ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1,740 ರೂ. ಗೆ ಲಭ್ಯವಾಗುತ್ತಿತ್ತು.

ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಹೊರೆಯಾಗಲಿದೆ. ವಾಣಿಜ್ಯ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ತಿಂಗಳಿಂದ ತಿಂಗಳಿಗೆ ಖರ್ಚು ಹೆಚ್ಚಾಗುತ್ತಿದೆ. ಇದು ಹೋಟೆಲ್‌ಗಳ ದರ ಪಟ್ಟಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಲೆಗಳಲ್ಲಿನ ಹಠಾತ್ ಹೆಚ್ಚಳವು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ಹಿಡಿದು ಸಣ್ಣ-ಪ್ರಮಾಣದ ಕೈಗಾರಿಕೆಗಳವರೆಗೆ ವಿವಿಧ ವಲಯಗಳ ವ್ಯವಹಾರಗಳ ಮೇಲೆ ಹೊರೆಯಾಗಲಿದೆ.

ಈ ಸುದ್ದಿಯನ್ನೂ ಓದಿ : LPG Price Hike: ತಿಂಗಳ ಆರಂಭದಲ್ಲೇ ಬೆಲೆ ಏರಿಕೆಯ ಶಾಕ್‌; ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್‌ ಸಿಲಿಂಡರ್ ದರ ಹೆಚ್ಚಳ

ಈ ವರ್ಷ ವಾಣಿಜ್ಯ LPG ಸಿಲಿಂಡರ್‌ಗಳ ದರಗಳು ಬದಲಾಗಿದ್ದು ಹೀಗೆ (ರೂಪಾಯಿಗಳಲ್ಲಿ)

1 ನವೆಂಬರ್ 1802

1 ಅಕ್ಟೋಬರ್ 1740

1 ಸೆಪ್ಟೆಂಬರ್ 1691.50

1 ಆಗಸ್ಟ್ 1652.50

1 ಜುಲೈ 1646.00

1 ಜೂನ್ 1676.00

1 ಮೇ 1745.50

1 ಏಪ್ರಿಲ್ 1764.50

1 ಮಾರ್ಚ್ 1795.00

1 ಫೆಬ್ರವರಿ 1769.50

1 ಜನವರಿ 1755.50