Sunday, 11th May 2025

ಟೆಟ್ರಾ ಪ್ಯಾಕ್‌’ಗಳಲ್ಲಿ ಮದ್ಯ ಮಾರಾಟ: ತಮಿಳುನಾಡು ಸರ್ಕಾರ ಚಿಂತನೆ

ಚೆನ್ನೈ: ನಕಲಿ ತಡೆ, ಬೆಲೆ, ಪರಿಸರ ಮತ್ತು ಶುಚಿತ್ವದ ದೃಷ್ಟಿಯಿಂದ ಟೆಟ್ರಾ ಪ್ಯಾಕ್‌ ಅಥವಾ ಪ್ಲಾಸ್ಟಿಕ್​ ಬಾಟಲಿಗಳಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ತಮಿಳುನಾಡು ಸರ್ಕಾರ ಚಿಂತನೆ ನಡೆಸಿದೆ.

ಕಲ್ಲಕುರಿಚಿಯಲ್ಲಿ ನಕಲಿ ಮದ್ಯದಿಂದ ನಡೆದ ಅನಾಹುತದ ಬಳಿಕ ಎಚ್ಚೆತ್ತುಕೊಂಡಿರುವ ಸ್ಟಾಲಿನ್​ ಸರ್ಕಾರ, ಬಡವರ ಕೈಗೆಟಕುವಂತೆ 50 ರೂ.ನಿಂದ 80ರೂ.ಒಳಗೆ 100ಎಂಎಲ್​ನ ಕ್ವಾರ್ಟರ್ ಪ್ಲಾಸ್ಟಿಕ್​ ಬಾಟಲಿಗಳು ಅಥವಾ ಟೆಟ್ರಾಪ್ಯಾಕ್​ಗಳಲ್ಲಿ ಮದ್ಯ ಮಾರಾಟ ಮಾಡಲು ಮುಂದಾಗಿದೆ.

ಕಡಿಮೆ ಬೆಲೆಗೆ ನಕಲಿ ಮಾಡದಂತೆ ಮದ್ಯ ಒದಗಿಸುವುದರಿಂದ ಕೂಲಿ ಕಾರ್ಮಿಕರು ಅದನ್ನು ಖರೀದಿಸುತ್ತಾರೆ. ಇದು ಜನರ ಬೇಡಿಕೆಯೂ ಆಗಿದೆ.

ನೆರೆಯ ಕರ್ನಾಟಕ ಮತ್ತು ಪುದುಚೇರಿಯಲ್ಲಿ ಈಗಾಗಲೇ ಕಾಗದದ ಪೊಟ್ಟಣಗಳಲ್ಲಿ ಮದ್ಯಮಾರಾಟ ಮಾಡಲಾಗುತ್ತಿದೆ. ಇದರ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಅಧಿಕೃತ ತಂಡವನ್ನು ರಚಿಸಲಾಗಿದೆ ಎಂದು ಅಬಕಾರಿ ಸಚಿವ ಎಸ್.ಮುತ್ತುಸಾಮಿ ತಿಳಿಸಿದ್ದಾರೆ.

ಮರುಬಳಕೆ ಮಾಡಬಹುದಾದ ಮದ್ಯದ ಬಾಟಲಿಗಳ ಅಸಮರ್ಪಕ ಶುಚಿಗೊಳಿಸುವಿಕೆಯಿಂದ ಅನಾಹುತಗಳು ನಡೆಯಬಹುದು. ಆದರೆ ಟೆಟ್ರಾ ಪ್ಯಾಕ್‌ ಗಳು ಅಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ. ಕಲಬೆರಕೆ ಮಾಡಲಾಗುವುದಿಲ್ಲ. ನಿರ್ವಹಿಸಲು ಸುಲಭ ಎಂದು ಹೇಳಿದ್ದಾರೆ.

2001ರಲ್ಲಿ ತಮಿಳುನಾಡಿನಲ್ಲಿ ಮದ್ಯದ ಸಾವು ಹೆಚ್ಚಾದಾಗ 100 ಎಂಎಲ್ ಗೆ 15 ರೂ.ಗೆ ಅಗ್ಗದ ಮದ್ಯ ಮಾರಾಟ ಆರಂಭಿಸಿ, ಕೊನೆಗೆ ನಿಲ್ಲಿಸಲಾಗಿತ್ತು.

Leave a Reply

Your email address will not be published. Required fields are marked *