Wednesday, 14th May 2025

ಲಷ್ಕರ್‌ ಕಮಾಂಡರ್‌ ಹತ್ಯೆ: ಯೋಧರಿಗೆ ಗಾಯ

ಶ್ರೀನಗರ: ಉತ್ತರ ಕಾಶ್ಮೀರದ ಪರಿಸ್ವಾನಿ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಲಷ್ಕರ್‌-ಎ-ತಯಬ ಸಂಘಟನೆಯ ಅತ್ಯುನ್ನತ ಕಮಾಂಡರ್‌ ಮೊಹಮ್ಮದ್‌ ಯೂಸುಫ್‌ ಹತ್ಯೆಯಾಗಿದ್ದು, ಮೂವರು ಯೋಧರು, ನಾಗರಿಕರೊಬ್ಬರು ಗಾಯಗೊಂಡಿ ದ್ದಾರೆ.

‘ಎನ್‌ಕೌಂಟರ್‌ ಆರಂಭದ ಹಂತದಲ್ಲಿ ಮೂವರು ಯೋಧರು ಹಾಗೂ ನಾಗರಿಕರೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖ ಲಿಸಲಾಗಿದೆ’ ಎಂದು ವಿಜಯಕುಮಾರ್‌ ಹೇಳಿದರು.

‘ಭಾರತೀಯ ಸೇನೆ, ಸಿಆರ್‌ಪಿಎಫ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾ ಚರಣೆ ನಡೆಸಿ ಎಲ್‌ಇಟಿಯ ಅತ್ಯುನ್ನತ ಕಮಾಂಡರ್‌ ನನ್ನು ಕೊಂದಿರುವುದು ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು. ಈತ ಕಣಿವೆಯಲ್ಲಿ ಕಳೆದ 20 ವರ್ಷಗಳಿಂದ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ’ ಎಂದು ಹೇಳಿದರು.