Sunday, 18th May 2025

ಜಿಎಚ್ ಟಿಸಿ ಇಂಡಿಯಾ ಅಡಿಯಲ್ಲಿ ಪ್ರಧಾನಿಯವರಿಂದ ಲೈಟ್ ಹೌಸ್ ಪ್ರಾಜೆಕ್ಟ್ಸ್ ಶಂಕುಸ್ಥಾಪನೆ

ನವದೆಹಲಿ : ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ರೂಪಿಸಿರುವ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ (ಜಿಎಚ್ ಟಿಸಿ) ಇಂಡಿಯಾ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೈಟ್ ಹೌಸ್ ಪ್ರಾಜೆಕ್ಟ್ಸ್ (ಎಲ್ ಎಚ್ ಪಿ) ಶಂಕುಸ್ಥಾಪನೆ ನೆರವೇರಿಸಿದರು.

ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಸುಸ್ಥಿರ ಮತ್ತು ವಿಪತ್ತು ನಿವಾರಕ ನವೀನ ತಂತ್ರಜ್ಞಾನಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಗುರಿ ಯನ್ನು ಈ ಯೋಜನೆ ಹೊಂದಿದೆ ಎಂದು ತಿಳಿದು ಬಂದಿದೆ.

2021ರ ಮೊದಲ ದಿನ ಭಾರತದ ನಗರ ಚಿತ್ರಣವನ್ನು ಬದಲಾಯಿಸುವ ಉದ್ದೇಶದ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಯೋಜನೆಯ ಅಡಿ ಯಲ್ಲಿ, ಅಗರ್ತಲಾ, ಲಕ್ನೋ, ಇಂದೋರ್, ರಾಜ್ ಕೋಟ್, ಚೆನ್ನೈ ಮತ್ತು ರಾಂಚಿಗಳಲ್ಲಿ ಎಲ್ ಎಚ್ ಪಿಗಳನ್ನು ನಿರ್ಮಿಸ ಲಾಗುತ್ತದೆ, ಪ್ರತಿ ಸ್ಥಳವು ಆರ್ಥಿಕವಾಗಿ ದುರ್ಬಲವಾಗಿರುವವರಿಗೆ (ಇಡಬ್ಲ್ಯುಎಸ್) 1,000ಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಾಣಮಾಡಲಾಗುವುದು.

Leave a Reply

Your email address will not be published. Required fields are marked *