Sunday, 11th May 2025

ಭೂಕುಸಿತ: ಎಂಟು ಮಂದಿಗೆ ಗಾಯ

ಕಂಗ್ರಾ: ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಕಾಂಗ್ರಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಹಿಟ್ಟಿನ ಗಿರಣಿ ಬಳಿ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿದೆ ಎಂದು ನಿರ್ವಹಣಾ ನಿರ್ದೇಶಕ ಸುದೇಶ್ ಮೊಖ್ತಾ ತಿಳಿಸಿದ್ದಾರೆ.

ಗಾಯಾಳುಗಳನ್ನು ಪಶ್ಚಿಮ ಬಂಗಾಳ ಮೂಲದ ಸಹದೇವ್ (21) ಮತ್ತು ಅವರ ಸಹೋದರ ವಾಸುದೇವ್ (30), ರಾಜೀವ್ ಕುಮಾರ್ (19), ಗೌರವ್ (20), ದೇವ್ ನಾರಾ ಯಣ್ (40), ಜಗತ್ (42) ಉತ್ತರ ಪ್ರದೇಶದ ನೀತು ( 24) ಮತ್ತು ಕಾಂಗ್ರಾ ಜಿಲ್ಲೆಯ ವಿನಯ್ ಕುಮಾರ್ (44) ಎಂದು ಗುರುತಿಸಲಾಗಿದೆ.

ಮಂಗಳವಾರ ಹಿಮಾಚಲ ಪ್ರದೇಶದ ಶಲ್ಖರ್ ಗ್ರಾಮದಲ್ಲಿ ಮತ್ತೊಂದು ಮೇಘಸ್ಫೋಟದ ಘಟನೆ ವರದಿಯಾಗಿದೆ. ಮೇಘಸ್ಫೋಟದಿಂದಾಗಿ ಹಲವಾರು ಸಣ್ಣ ನೀರಿನ ಕಾಲುವೆಗಳು ಸಹ ಕೊಚ್ಚಿಹೋಗಿವೆ.

ಸೋಮವಾರ ಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಹಲವಾರು ಜನರು ಕೊಚ್ಚಿಹೋಗಿದ್ದಾರೆ ಎಂದು ಡಿಇಒಸಿ ಆತಂಕ ವ್ಯಕ್ತಪಡಿಸಿದರು.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಶಿಮ್ಲಾದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲಾ ಜಿಲ್ಲೆಗಳ ಉಪ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿ ಕಾರಿಗಳೊಂದಿಗೆ ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾಗುವ ವಿವಿಧ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಆಡಳಿತದ ಸನ್ನದ್ಧತೆ ಪರಿಶೀಲಿಸಿದರು.