ಲಂಡನ್: ಚಿನ್ನ ಬಿಡಿ ಈಗ ಕಾಲೂರುವುದಕ್ಕೆ ಬೇಕಾಗುವಷ್ಟು ಹಿಡಿ ಜಾಗ ತೆಗೆದುಕೊಳ್ಳುತ್ತೇವೆ ಎಂದರೆ ಅದರ ಬೆಲೆ ಕೂಡ ಗಗನಕ್ಕೇರಿದೆ. ಆದರೆ ಇಲ್ಲೊಂದು ಕುಟುಂಬವನ್ನು ಭೂಮಿಯ ಮೇಲಿನ ಅತಿದೊಡ್ಡ ಭೂಮಾಲೀಕರು (Landowners in the World) ಎಂದು ಕರೆಯಲಾಗುತ್ತದೆ. ಯಾಕೆಂದರೆ ಈ ಕುಟುಂಬವು ಇಡೀ ವಿಶ್ವದಲ್ಲಿ 16% ಭೂಪ್ರದೇಶವನ್ನು ಹೊಂದಿದೆಯಂತೆ. ಅವರ ಹಿಡುವಳಿಗಳು ವಿಶ್ವದ ಉತ್ತರದ ತುದಿಯಿಂದ ದಕ್ಷಿಣದ ಭಾಗಗಳವರೆಗೆ ವ್ಯಾಪಿಸಿದೆ ಮತ್ತು ವಿಶಾಲವಾದ ಕೃಷಿ ಕ್ಷೇತ್ರಗಳು, ದಟ್ಟವಾದ ಕಾಡುಗಳು, ರಿಯಲ್ ಎಸ್ಟೇಟ್ ಮತ್ತು ಪ್ರಾಚೀನ ಕರಾವಳಿ ಪ್ರದೇಶಗಳನ್ನು ಒಳಗೊಂಡಿದೆ. ಈ ಅಗಾಧವಾದ ಎಸ್ಟೇಟ್ ಅನ್ನು ಕ್ರೌನ್ ಎಸ್ಟೇಟ್ ಎಂದು ಕರೆಯಲ್ಪಡುವ ಪ್ರತಿಷ್ಠಿತ ಸಂಸ್ಥೆ ನಿರ್ವಹಿಸುತ್ತದೆ.
ಈ ಕುಟುಂಬ ಯಾವುದೆಂದರೆ ರಾಜ 3ನೇ ಚಾರ್ಲ್ಸ್ ನೇತೃತ್ವದ ಬ್ರಿಟಿಷ್ ರಾಯಲ್ ಫ್ಯಾಮಿಲಿ. ಈ ಕುಟುಂಬ ರಾಣಿ ಎಲಿಜಬೆತ್ II ಅವರ ನಿಧನದ ನಂತರ ಈ ಬೃಹತ್ ಸಾಮ್ರಾಜ್ಯವನ್ನು ಆನುವಂಶಿಕವಾಗಿ ಪಡೆದುಕೊಂಡಿತು. ಕಿಂಗ್ ಚಾರ್ಲ್ಸ್ ಈ ಸಂಪತ್ತಿನ ಪ್ರಸ್ತುತ ಮಾಲೀಕರಾಗಿದ್ದರೂ, ಅವರು ಅದನ್ನು ಖಾಸಗಿಯಾಗಿ ಹೊಂದಿಲ್ಲ. ಆಸ್ತಿಗಳು ಮತ್ತು ಭೂಮಿಯನ್ನು ರಾಜರ ಉಸ್ತುವಾರಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬಳಸಲಾಗುತ್ತದೆಯಂತೆ.

ವರದಿಗಳ ಪ್ರಕಾರ, 3ನೇ ಕಿಂಗ್ ಚಾರ್ಲ್ಸ್ ಗ್ರೇಟ್ ಬ್ರಿಟನ್, ಐರ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ಪ್ರದೇಶಗಳಲ್ಲಿ ಹರಡಿರುವ 6.6 ಬಿಲಿಯನ್ ಎಕರೆ ಭೂಮಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಇದು ಭೂಮಿಯ ಒಟ್ಟು ಭೂಪ್ರದೇಶದ ಸರಿಸುಮಾರು 16.6% ರಷ್ಟಿದೆ. ಈ ಸ್ವತ್ತುಗಳಲ್ಲಿ ಕೃಷಿಭೂಮಿ, ಅರಣ್ಯಗಳು, ಚಿಲ್ಲರೆ ಆಸ್ತಿಗಳು, ವಸತಿ ಪ್ರದೇಶಗಳು, ಕಚೇರಿ ಸಂಕೀರ್ಣಗಳು ಸೇರಿವೆ.
ಈ ಹಿಡುವಳಿಗಳನ್ನು ನಿರ್ವಹಿಸುವ ಕ್ರೌನ್ ಎಸ್ಟೇಟ್, ರಿಯಲ್ ಎಸ್ಟೇಟ್ ಸ್ವಾಧೀನಗಳು, ಶಾಪಿಂಗ್ ಕೇಂದ್ರಗಳ ಕಾರ್ಯಾಚರಣೆಗಳು ಮತ್ತು ಮರಳು, ಜಲ್ಲಿ, ಸುಣ್ಣದ ಕಲ್ಲು ಮತ್ತು ಕಲ್ಲಿದ್ದಲಿನಂತಹ ಸಂಪನ್ಮೂಲಗಳೊಂದಿಗೆ ವ್ಯವಹರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಈ ಸಂಸ್ಥೆಯು ರಾಜಪ್ರಭುತ್ವದ ವ್ಯಾಪಕ ಸ್ವತ್ತುಗಳಿಂದ ಆದಾಯವನ್ನು ಗಳಿಸುತ್ತದೆ.
ಹೆಚ್ಚುವರಿಯಾಗಿ, ಡಚಿ ಆಫ್ ಲ್ಯಾಂಕಾಸ್ಟರ್ ಅಡಿಯಲ್ಲಿ ಖಾಸಗಿ ಆಸ್ತಿ ಹಿಡುವಳಿಗಳಿಂದ ರಾಜನು ಪ್ರಯೋಜನ ಪಡೆಯುತ್ತಾನೆ. ಇದು 654 ಮಿಲಿಯನ್ ಡಾಲರ್ ಮೌಲ್ಯದ 18,000 ಹೆಕ್ಟೇರ್ ಭೂಮಿಯನ್ನು ಒಳಗೊಂಡಿದೆ. ಈ ಆಸ್ತಿಯು ಸರಿಸುಮಾರು 20 ಮಿಲಿಯನ್ ಡಾಲರ್ ವಾರ್ಷಿಕ ಲಾಭವನ್ನು ಪಡೆದುಕೊಳ್ಳುತ್ತದೆ.
ಈ ಸುದ್ದಿಯನ್ನೂ ಓದಿ:ವಿಸಿ ಕಚೇರಿಯ ಮುಂದೆ ಡ್ಯಾನ್ಸ್ ಮಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು; ಕಾರಣವೇನು?
ಕ್ರೌನ್ ಎಸ್ಟೇಟ್ ನಿರಂತರವಾಗಿ ಪ್ರತಿವರ್ಷದ ಗಮನಾರ್ಹ ಲಾಭವನ್ನು ನೀಡುತ್ತದೆ. 2022ರಲ್ಲಿ ಇದು 490.8 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಿತು. 2022ರ ಸೆಪ್ಟೆಂಬರ್‌ನಲ್ಲಿ 3ನೇ ಕಿಂಗ್ ಚಾರ್ಲ್ಸ್ ಸಿಂಹಾಸನವನ್ನು ಏರಿದಾಗ, ಅವರು 46 ಬಿಲಿಯನ್ ಡಾಲರ್ ಮೌಲ್ಯದ ಸಾಮ್ರಾಜ್ಯದ ನಿಯಂತ್ರಣವನ್ನು ವಹಿಸಿಕೊಂಡರು. ಅದರಲ್ಲಿ ಹೆಚ್ಚಿನವು ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿವೆ.