Tuesday, 13th May 2025

ಲಾಲು ಆರೋಗ್ಯ ಸ್ಥಿತಿ ಗಂಭೀರ

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಲಾಲು ಅವರನ್ನ ಬುಧವಾರ ರಾತ್ರಿ ಪಾಟ್ನಾ ಆಸ್ಪತ್ರೆಯಿಂದ ಏರ್ಲಿಫ್ಟ್ ಮಾಡಿದ ಬಳಿಕ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲಿಸಲಾಯಿತು.

ಲಾಲು ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಮೆಟ್ಟಿಲುಗಳಿಂದ ಬೀಳುತ್ತಿದ್ದಂತೆ, ಅವರ ದೇಹದ ಚಲನೆ ಈ ಸಮಯದಲ್ಲಿ ಕಡಿಮೆಯಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದರು.

ಲಾಲು ಅವರ ಪತ್ನಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ಅನಾರೋಗ್ಯ ದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ. ಅವ್ರು ಶೀಘ್ರದಲ್ಲೇ ಮನೆಗೆ ಹಿಂದಿರುಗುತ್ತಾರೆ’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ತೇಜಸ್ವಿ ಯಾದವ್ ಅವರಿಗೆ ಕರೆ ಮಾಡಿ ನಾಯಕನ ಆರೋಗ್ಯ ಸ್ಥಿತಿಯನ್ನು ತಿಳಿದುಕೊಂಡರು. ಕೆಲವು ದಿನಗಳ ಹಿಂದೆ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತು ಬಿಹಾರದ ಇತರ ಹಲವಾರು ನಾಯಕರು ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದರು.