Sunday, 11th May 2025

ಲಾಲೂಗೆ 6 ಸಾವಿರ ರೂ.ದಂಡ

ರಾಂಚಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ(13 ವರ್ಷಗಳ ಹಿಂದಿನ) ದಲ್ಲಿ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್’ರಿಗೆ ಜಾರ್ಖಂಡ್‌ ಪಲಾ ಮು ವಿಶೇಷ ನ್ಯಾಯಾಲಯ ಆರು ಸಾವಿರ ರೂಪಾಯಿ ದಂಡ ವಿಧಿಸಿದೆ.

2009 ರ ಹಿಂದಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ದಂಡ ವಿಧಿಸಿದೆ. ಬಿಹಾರದ ಮಾಜಿ ಸಿಎಂ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಅರ್ಜಿ ಆಲಿಸಿದ ನ್ಯಾಯಾಲಯವು 6 ಸಾವಿರ ರೂ. ದಂಡ ವಿಧಿಸಿದೆ.

ಕಳೆದ ತಿಂಗಳು, ಕೇಂದ್ರೀಯ ತನಿಖಾ ದಳ ‘ರೈಲ್ವೆ ಉದ್ಯೋಗಕ್ಕಾಗಿ ಭೂಮಿ’ ಪ್ರಕರಣದಲ್ಲಿ ಲಾಲು ಯಾದವ್, ಅವರ ಪತ್ನಿ, ಪುತ್ರಿಯರು ಮತ್ತು ಇತರರನ್ನು ಪ್ರಕರಣದಲ್ಲಿ ಆರೋಪಿ ಗಳೆಂದು ಗುರುತಿಸಿದೆ.

ದೆಹಲಿ ಮತ್ತು ಬಿಹಾರದಲ್ಲಿ ಲಾಲು ಯಾದವ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ 17 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ.