Sunday, 11th May 2025

ಉಗ್ರರ ದಾಳಿಗೆ ಬಿಹಾರ ಮೂಲದ ಕಾರ್ಮಿಕನ ಸಾವು

ಬಂಡಿಪೋರಾ: ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸೋದನಾರ ಸುಂಬಲ್ ಎಂಬ ಪ್ರದೇಶದಲ್ಲಿ ಉಗ್ರಗಾಮಿಗಳು ಬಿಹಾರ ಮೂಲದ ಕಾರ್ಮಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ತೀವ್ರ ಗಾಯಗೊಂಡ ಕಾರ್ಮಿಕ ಮೃತಪಟ್ಟಿ ದ್ದಾರೆ.

ಮೃತನನ್ನು ಮೊಹಮ್ಮದ್ ಅಮ್ರೇಜ್ ಎಂದು ಗುರುತಿಸಲಾಗಿದ್ದು, ಇವರು ಬಿಹಾರದ ಮಾದೇಪುರದವರು. ಗುಂಡು ತಗುಲಿದ ಕೂಡಲೇ ಅವರನ್ನು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಸೇನಾ ಸಿಬ್ಬಂದಿ ಮೂಲಶಿಬಿರದಲ್ಲಿ ಆತ್ಮಾಹುತಿ ಬಾಂಬ್ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿ ಇಬ್ಬರು ಉಗ್ರರ ನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು.