ಮುಂಬೈ: ಕವಿ ಹಾಗೂ ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಕುಮಾರ್ ವಿಶ್ವಾಸ್ (Kumar Vishwas) ಅವರು ಉತ್ತರ ಪ್ರದೇಶದ ಮೀರತ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ಒಂದನ್ನು ನೀಡಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಹಾಗೂ ಸೋನಾಕ್ಷಿ ಸಿನ್ಹಾ ( Sonakshi Sinha) ಅವರನ್ನು ಗುರಿಯಾಗಿಸಿಕೊಂಡು ಅವರು ಟೀಕಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. (Viral Video)
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನೆಗೆ ರಾಮಾಯಣ ಎಂದು ಹೆಸರಿಟ್ಟರೆ ಸಾಲದು , ಪೋಷಕರು ತಮ್ಮ ಮಕ್ಕಳಿಗೆ ರಾಮಾಯಣವನ್ನು ಕಲಿಸಬೇಕು, ಇಲ್ಲದಿದ್ದರೆ ಅವರ ಮನೆಯ ಲಕ್ಷ್ಮಿಯನ್ನು ಬೇರೆಯವರು ಹೊತ್ತುಕೊಂಡು ಹೋಗುತ್ತಾರೆ ಎಂದು ಹೇಳಿದ್ದರು.
MASSIVE uproar after the video is viral !!pic.twitter.com/YdYgzlBcbA
— Times Algebra (@TimesAlgebraIND) December 22, 2024
ಟೀಕೆಗಳು ಸಿನ್ಹಾ ಅವರ ಕುಟುಂಬವನ್ನು ಗೇಲಿ ಮಾಡುವಂತೆ ತೋರುತ್ತಿದೆ ಏಕೆಂದರೆ ಶತ್ರುಘ್ನ ಅವರ ಮುಂಬೈ ಮನೆಗೆ ‘ರಾಮಾಯಣ’ ಎಂದು ಹೆಸರಿಸಲಾಗಿದ್ದು, ಅವರ ಪುತ್ರಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ಕುಮಾರ್ ವಿಶ್ವಾಸ್ ಟೀಕಿಸಿದ್ದಾರೆ.
ಕುಮಾರ್ ವಿಶ್ವಾಸ್ ಅವರ ಈ ಮಾತಿಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ವಾಗ್ದಾಳಿ ನಡೆಸಿ ಬೇರೆಯವರ ಮಗಳ ಮೇಲೆ ಅಶ್ಲೀಲ ಕಾಮೆಂಟ್ಗಳನ್ನು ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೀರಾ” ಎಂದು ಕೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಿಮ್ಮ ಮನೆಯ ಶ್ರೀಲಕ್ಷ್ಮಿಯನ್ನು ಬೇರೆಯವರು ಕಸಿದುಕೊಳ್ಳುತ್ತಾರೆ” ಎಂಬ ನಿಮ್ಮ ಮಾತು, ಹೆಣ್ಣು ಎಂದರೆ ಯಾರೋ ಎಲ್ಲೋ ಕಸಿದುಕೊಳ್ಳುವ ವಸ್ತುವೇ? ಮೊದಲು ತಂದೆಯ ವಸ್ತು ನಂತರ ಪತಿಯ ವಸ್ತು ಎಂದು ಪರಿಗಣಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
अगर आपके अपने घर में एक बेटी हो तो क्या आप किसी और की बेटी पर भद्दी टिप्पणी करके सस्ती तालियाँ बटोरेंगे?
— Supriya Shrinate (@SupriyaShrinate) December 22, 2024
ऐसा करने पर आप किस हद तक गिरे हुए हैं, इसका तो अंदाज़ा लग ही गया है
कुमार विश्वास जी आपने सोनाक्षी सिन्हा के अंतरधार्मिक विवाह पर तो घटिया तंज किया ही पर आपने अपने अंदर…
ಸಾಮಾಜಿಕ ಜಾಲತಾಣದಲ್ಲಿ ಸುಪ್ರಿಯಾ ಪರ ಮಾತನಾಡಿದ ನೆಟ್ಟಿಗರು ಶತ್ರುಘ್ನ ಮತ್ತು ಸೋನಾಕ್ಷಿ ಸಿನ್ಹಾ ಬಳಿ ವಿಶ್ವಾಸ್ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಸೋನಾಕ್ಷಿ ಅಂತರ್ಧರ್ಮೀಯ ವಿವಾಹವಾದ ಕಾರಣ ಹಲವು ಟೀಕೆಗಳು ಎದುರಾಗಿದ್ದವು.
ಈ ಸುದ್ದಿಯನ್ನೂ ಓದಿ : Viral Video: ಲೆಹಂಗ ಮತ್ತು ಸ್ಕರ್ಟ್ ಧರಿಸಿ ʼಸಾರಿ ಕೆ ಫಾಲ್ ಸಾ..ʼ ಹಾಡಿಗೆ ʼಡ್ಯಾನ್ಸಿಂಗ್ ದಾದಿʼಯ ನೃತ್ಯ; ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು..!