ಹೊಸದಿಲ್ಲಿ: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ ಚಿತ್ರ ಡಿಸೆಂಬರ್ 5 ರಂದು ಬಿಡುಗಡೆಯಾಗಿದೆ. ಇದರ ಹಾಡುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಈ ನಡುವೆ ತಾಂಜೇನಿಯಾದ ಕಿಲಿ ಪೌಲ್ (Kili Paul) ಈ ಚಿತ್ರದ ಜನಪ್ರಿಯ ಹಾಡಿಗೆ ಕುಣಿದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಅವರ ನೃತ್ಯದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ʼಪುಷ್ಪ 2ʼ ಚಿತ್ರ ಈಗ ಸಖತ್ ಸುದ್ದಿಯಲ್ಲಿದೆ. ಇದರ ಹಾಡು ಹಾಗೂ ಡೈಲಾಗ್ಸ್‌ಗಳನ್ನು ಜನರು ಲಿಪ್-ಸಿಂಕ್, ನೃತ್ಯದ ಮೂಲಕ ಮರುಸೃಷ್ಟಿಸುವುದನ್ನು ತೋರಿಸುವ ಅನೇಕ ರೀಲ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಸದ್ದು ಮಾಡಿವೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೊ ಸಖತ್ ವೈರಲ್ ಆಗಿದೆ. ಅದ್ಯಾವುದೆಂದರೆ ತಾಂಜೇನಿಯಾದ ಕಿಲಿ ಪೌಲ್ ʼಪುಷ್ಪ: ದಿ ರೂಲ್ʼ ಚಿತ್ರದ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು!

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ಚಿತ್ರದ ‘ಪೀಲಿಂಗ್ಸ್’ ಹಾಡಿಗೆ ತಮ್ಮ ಅದ್ಭುತವಾದ ನೃತ್ಯ ಪ್ರದರ್ಶನ ತೋರಿಸಿದ ವಿಡಿಯೊವನ್ನು ಕಿಲಿ ಪೌಲ್ ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‍ನಲ್ಲಿ ಬಿಡುಗಡೆ ಮಾಡಿದ್ದಾರೆ. ವಿಡಿಯೊದಲ್ಲಿ ಅವರು ಬಹಳ ಖುಷಿಯಿಂದ ನೃತ್ಯ ಮಾಡಿದ್ದಾರೆ. ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಅವರು ʼಪುಷ್ಪ 2ʼ ಚಿತ್ರದ ಈ ಅಪ್ರತಿಮ ಬೀಟ್‌ಗೆ ಹೆಜ್ಜೆ ಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ:ರೈಲಿಸುವ ರೈಲಿನ ಯುವಕನ ಸಾಹಸ; ಎದೆ ಝಲ್ಲೆನಿಸುವ ವಿಡಿಯೊ ನೋಡಿ
ಅವರ ಆಕರ್ಷಕ ಚಲನೆಗಳು ಮತ್ತು ಅದ್ಭುತವಾದ ಮುಖಭಾವಗಳು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿದ್ದು, ಅನೇಕರು ಇದಕ್ಕೆ ಲೈಕ್ ಬಟನ್ ಒತ್ತಿದ್ದಾರೆ. ಈ ರೀಲ್ ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು 28,600 ಲೈಕ್‍ಗಳನ್ನು ಪಡೆದಿದೆ. ಹಾಗೇ ಸಾಕಷ್ಟು ಕಾಮೆಂಟ್‌ಗಳು ಈ ವಿಡಿಯೊಗೆ ದಕ್ಕಿದೆ. ಕಾಮೆಂಟ್ ವಿಭಾಗದಲ್ಲಿ ‘ಹಾರ್ಟ್’ ಮತ್ತು ‘ಫೈರ್’ ಎಮೋಜಿಗಳು ಕಾಣಿಸಿಕೊಂಡಿದ್ದು, ನೆಟ್ಟಿಗರು ಅವರ ನೃತ್ಯವನ್ನು ಹಾಡಿ ಹೊಗಳಿದ್ದಾರೆ.