Wednesday, 14th May 2025

ಸೋಲಾರ್ ಹಗರಣ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿ ಸಾವು

ಲಪ್ಪುಳ: ಸೋಲಾರ್ ಹಗರಣ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ಡಿವೈಎಸ್‌ಪಿ ಕೆ. ಹರಿಕೃಷ್ಣನ್ ಹರಿಪಾಡ್‌ನ ಏವೂರ್‌ನಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಕೇರಳದ ರಾಮಪುರಂ ದೇವಸ್ಥಾನದ ಪೂರ್ವದ ಲೆವೆಲ್ ಕ್ರಾಸಿಂಗ್ ನಲ್ಲಿ ಹರಿಕೃಷ್ಣನ್ ಶವ ಪತ್ತೆಯಾಗಿದೆ.

ಅಪಘಾತದ ಸ್ಥಳದ ಸಮೀಪವೇ ಅವರ ಕಾರನ್ನು ನಿಲ್ಲಿಸಲಾಗಿದ್ದು, ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಮೃತರ ಸಂಬಂಧಿಕರ ಪ್ರಕಾರ, ಹರಿಕೃಷ್ಣನ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಪೆರುಂಬವೂರಿನಲ್ಲಿ ಡಿವೈಎಸ್ಪಿ ಆಗಿದ್ದ ಹರಿಕೃಷ್ಣನ್ ಅವರು ಈ ಹಿಂದೆ ಸೋಲಾರ್ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಹಲವರ ಟೀಕೆಗೆ ಗುರಿಯಾಗಿದ್ದರು.

ಜುಲೈ 2013 ರಲ್ಲಿ, ಸೋಲಾರ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಸರಿತಾ ಎಸ್. ನಾಯರ್ ಅವರನ್ನು ತನಿಖಾಧಿಕಾರಿ ಯನ್ನು ಸಂಪರ್ಕಿಸದೆ ಏಕ ಪಕ್ಷಿಯವಾಗಿ ಬಂಧಿಸಿ ಹರಿಕೃಷ್ಣನ್ ಸುದ್ದಿಯಾಗಿದ್ದರು.