Wednesday, 14th May 2025

ಎರಡು ಮುಖ, ಮೂರು ಕಣ್ಣುಗಳುಳ್ಳ ಮೇಕೆ ಮರಿ ಜನನ

ಮನಯಪರಂಬು: ಕೇರಳದಲ್ಲಿ ಎರಡು ಮುಖ ಹಾಗೂ ಮೂರು ಕಣ್ಣುಗಳುಳ್ಳ ವಿಚಿತ್ರ ಮೇಕೆ ಮರಿ ಜನಿಸಿದ್ದು, ಜನರು ಅಚ್ಚರಿ ಗೊಂಡಿದ್ದಾರೆ.

ಕುರಿ ಮರಿಗೆ ಎರಡು ಮುಖ ಹಾಗೂ ಮೂರು ಕಣ್ಣುಗಳಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಕೇರಳದ ಕೆಲಕಂನ ಮನಯಪರಂಬು ಎಂಬಲ್ಲಿ ಘಟನೆ ನಡೆದಿದ್ದು, ಮೇಕೆಯೊಂದು ವಿಚಿತ್ರವಾದ ಮರಿಗೆ ಜನ್ಮ ನೀಡಿದೆ. ವಿಸ್ಮಯವನ್ನು ನೋಡಲು ಜನರು ಮುಗಿಬಿದ್ದಿದ್ದು, ಕುರಿಮರಿಯನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿ ದ್ದಾರೆ.