ಈ ಎರಡನೇ ಹಂತದ ಉದ್ಯೋಗ ಕಡಿತದ ವೇಳೆ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಸಂಸ್ಥೆಯು ಶೇಕಡ 30ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.
ಈ ಬಾರಿ ಶೇಕಡ 30ರಷ್ಟು ಉದ್ಯೋಗ ಕಡಿತವೆಂದರೆ 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ರಿಲಯನ್ಸ್ ಬೆಂಬಲಿತ ಈ ರಿಟೇಲ್ ಕ್ವಿಕ್ ಕಾಮರ್ಸ್ ಸ್ಟಾರ್ಟ್‌ಅಪ್ ನಲ್ಲಿ ಪ್ರಾರಂಭದಲ್ಲಿ 75 ಮಿಲಿಯನ್ ಡಾಲರ್ ಹಣವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ 50 ಮಿಲಿಯನ್ ಡಾಲರ್ ಫಂಡಿಂಗ್ ಇನ್ಫ್ಯೂಷನ್ ಗೂಗಲ್ ಮತ್ತು ರಿಲಯನ್ಸ್ ರಿಟೇಲ್‌ನಿಂದ ಲಭ್ಯವಾಗಿದೆ. ಉಳಿದ ಮೊತ್ತವು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಲಭ್ಯವಾಗಿದೆ.
ಡೊನ್ಜೊ ಸ್ಥಾಪಕ ಮತ್ತು ಸಿಇಒ ಕಬೀರ್ ಬಿಸ್ವಾಸ್ ಉದ್ಯೋಗಿಗಳಿಗೆ ಉದ್ಯೋಗ ಕಡಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ 18 ತಿಂಗಳುಗಳಲ್ಲಿ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಕಂಪನಿಯು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.