ಬೆಂಗಳೂರು: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (National Aluminium Company Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್ ಆಪರೇಟಿವ್ ಟ್ರೈನಿ, ನರ್ಸ್ ಸೇರಿ ಒಟ್ಟು 518 ಹುದ್ದೆಗಳು ಖಾಲಿ ಇವೆ (NALCO Recruitment 2025). 10ನೇ ತರಗತಿ, ಐಟಿಐ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಡಿ. 31ರಂದು ಆರಂಭವಾಗಲಿದ್ದು, ಕೊನೆಯ ದಿನ 2025ರ ಜ. 21 (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಲ್ಯಾಬ್ 37 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಆಪರೇಟರ್ 226 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಫಿಟ್ಟರ್ 73 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಎಲೆಕ್ಟ್ರಿಕಲ್ 63 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಇನ್ಟ್ರುಮೆಂಟೇಶನ್ (ಎಂ & ಆರ್) /ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ (ಎಸ್ & ಪಿ) 48 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಭೂ ವಿಜ್ಞಾನಿ 4 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಎಚ್‌ಇಎಂಎಂ ಆಪರೇಟರ್ 9 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಗಣಿಗಾರಿಕೆ 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ
ಸೂಪರಿಟೆಂಡೆಂಟ್ ಜೂನಿಯರ್ ಆಪರೇಟಿವ್ ಟ್ರೈನಿ-ಮೈನಿಂಗ್ ಮೇಟ್ 15 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ಎಸ್‌ಯುಪಿಟಿ (ಜೆಒಟಿ)-ಮೋಟಾರ್ ಮೆಕ್ಯಾನಿಕ್ 22 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಡ್ರೆಸ್ಸರ್ ಮತ್ತು ಪ್ರಥಮ ಚಿಕಿತ್ಸೆ- 5 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ಪ್ರಯೋಗಾಲಯ ತಂತ್ರಜ್ಞ ಗ್ರೇಡ್ III- 2 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ, ಡಿಪ್ಲೊಮಾ
ನರ್ಸ್ ಗ್ರೇಡ್ III- 7 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಬಿ.ಎಸ್‌ಸಿ
ಫಾರ್ಮಾಸಿಸ್ಟ್ ಗ್ರೇಡ್ III- 6 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ
ವಯೋಮಿತಿ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ ವಯಸ್ಸು 27ರಿಂದ 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಆಯ್ಕೆ ವಿಧಾನ
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

NALCO Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://mudira.nalcoindia.co.in/Account/LoginRecruitment.aspx) - ಹೆಸರು ನೋಂದಾಯಿಸಿ.
- ಎಚ್ಚರಿಕೆಯಿಂದ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಈ ಸುದ್ದಿಯನ್ನೂ ಓದಿ: Job Guide: 10ನೇ ತರಗತಿ, ಐಟಿಐ ಪಾಸಾದವರಿಗೆ ಗುಡ್‌ನ್ಯೂಸ್; ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿದೆ 224 ಹುದ್ದೆ