Wednesday, 14th May 2025

ಲೈಂಗಿಕ ಕಿರುಕುಳ ಪ್ರಕರಣ: ಜೆಎನ್‌ಯು ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಧರಣಿ

ವದೆಹಲಿ: ಲೈಂಗಿಕ ಕಿರುಕುಳ ನೀಡಿದ ನಾಲ್ವರ ವಿರುದ್ಧ ಇನ್ನೂ ಕ್ರಮವಾಗಿಲ್ಲ ಎಂದು ಆರೋಪಿಸಿ ದೆಹಲಿಯ ಜವಾಹರ ಲಾಲ್ ನೆಹರು (ಜೆಎನ್‌ಯು) ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮಂಗಳವಾರ ಬೆಳಿಗ್ಗೆಯಿಂದ ವಿವಿಯ ಮುಖ್ಯದ್ವಾರದ ಬಳಿ ಅನಿರ್ದಾಷ್ಟವಧಿ ಧರಣಿ ಪ್ರಾರಂಭಿಸಿದ್ದಾರೆ.

‘ಮಾರ್ಚ್ 31ರಂದು ಕ್ಯಾಂಪಸ್‌ನ ಹಾಸ್ಟೆಲ್ ಬಳಿ ನಾಲ್ವರಿಂದ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಅದರಲ್ಲಿ ಇಬ್ಬರು ಇದೇ ವಿವಿಯ ಹಳೇ ವಿದ್ಯಾರ್ಥಿಗಳು. ಆದರೆ, ಇದುವರೆಗೂ ಅವರ ವಿರುದ್ಧ ಕ್ರಮವಾಗಲಿ, ಬಂಧನವಾಗಲಿ ಆಗಿಲ್ಲ ಎಂದು ವಿದ್ಯಾರ್ಥಿನಿ ದೂರಿದ್ದಾರೆ.

ವಿದ್ಯಾರ್ಥಿನಿಯ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಅವರ ಅಹವಾಲು ಸಲ್ಲಿಸಲು ಸಮಯ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ಶಿಸ್ತುಪಾಲನಾಧಿಕಾರಿ ಸುಧೀರ್ ಕುಮಾರ್ ತಿಳಿಸಿದ್ದಾರೆ.

ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿನಿ, ನನ್ನ ಮೇಲೆ ದೌರ್ಜನ್ಯ ನಡೆಸಿರುವವರನ್ನು ಮುಕ್ತವಾಗಿ ತಿರುಗಾಡಲು ಬಿಟ್ಟಿದ್ದಾರೆ ಎಂದು ಧರಣಿ ವೇಳೆ ಪ್ರತಿಕ್ರಿಯಿಸಿದ್ದಾರೆ.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವವರು ಇಬ್ಬರು ಆರ್‌ಎಸ್‌ಎಸ್‌ ಸಂಘಟನೆ ಹಾಗೂ ಇಬ್ಬರು ಎಬಿವಿಪಿಗೆ ಸಂಬಂಧಿಸಿ ದವರಾಗಿದ್ದಾರೆ ಎಂದು ಜೆಎನ್‌ಯುನ ವಿದ್ಯಾರ್ಥಿ ಒಕ್ಕೂಟದ ಎಡಪಂಥೀಯ ನಾಯಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *