Monday, 12th May 2025

J&K Horror : ಜಮ್ಮು ಕಾಶ್ಮೀರದ ಹೊಟೆಲ್‌ನಲ್ಲಿ ಮೂವರು ಸಹೋದರರ ಶವ ಪತ್ತೆ- ಅಷ್ಟಕ್ಕೂ ರಾತ್ರಿ ನಡೆದಿದ್ದಾದರೂ ಏನು?

J&K Horror

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ಅತಿಥಿ ಗೃಹದಲ್ಲಿ ಮೂವರು ಸಹೋದರರ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ.ದೋಡಾ ಜಿಲ್ಲೆಯ ಅತಿಥಿ ಗೃಹದಲ್ಲಿ ಮೂವರು ಸಹೋದರರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಠಡಿಯಲ್ಲಿ ಚಾರ್ಕೋಲ್ ಹೀಟರ್ ಪತ್ತೆಯಾಗಿದ್ದು, ಮೂವರು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. (J&K Horror)

ಮೃತರನ್ನು ಜಮ್ಮುವಿನ ನಿವಾಸಿಗಳಾದ ಮುಖೇಶ್ ಸಿಂಗ್ (39), ಅಶುತೋಷ್ ಸಿಂಗ್ ಮತ್ತು ಸನ್ನಿ ಚೌಧರಿ ಎಂದು ಗುರುತಿಸಲಾಗಿದ್ದು, ಅವರು ಹೊಸ ವರ್ಷದ ಆಚರಣೆಗಾಗಿ ಭದೇರ್ವಾಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಅಶುತೋಷ್ ತನ್ನ ಕುಟುಂಬದಿಂದ ಪದೇ ಪದೇ ಫೋನ್ ಮಾಡಿದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ಪೊಲೀಸರು ಮೊಬೈಲ್ ಫೋನ್ ಸ್ಥಳವನ್ನು ಟ್ರ್ಯಾಕ್ ಮಾಡಿದ್ದಾರೆ. ಅಲ್ಲಿ ಅವರಿಗೆ ಭದೇರ್ವಾದಲ್ಲಿನ ರಾಯಲ್ ಇನ್ ಅತಿಥಿ ಗೃಹದಲ್ಲಿ ಇರುವುದು ತಿಳಿದು ಬಂದಿದೆ.

ಕೋಣೆಯ ಬಾಗಿಲನ್ನು ಪದೇ ಪದೇ ಬಡಿದು ಯಾವುದೇ ಪ್ರತಿಕ್ರಿಯೆ ಬರದ ನಂತರ ಪೊಲೀಸರು ಅದನ್ನು ಒಡೆದು ನೋಡಿದಾಗ ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ನಂತರ ತಕ್ಷಣವೇ ವೈದ್ಯರು ಮತ್ತು ಫೋರೆನ್ಸಿಕ್ ತಜ್ಞರ ತಂಡಗಳನ್ನು ಸ್ಥಳಕ್ಕೆ ಕರೆಸಲಾಯಿತು. ಆದರೆ ಅಷ್ಟರಲ್ಲಾಗಲೇ ಮೂವರು ಮೃತಪಟ್ಟಿದ್ದರು.

ಘಟನೆಯ ಬಗ್ಗೆ ಮಾತನಾಡಿದ  ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಮೆಹ್ತಾ, “ಹೊಸ ವರ್ಷವನ್ನು ಆಚರಿಸಲು ಮೂವರು ಸಹೋದರರು ಭದೆರ್ವಾ ಬಂದಿದ್ದು, ಫೋನ್‌ ಕರೆಗೆ ಉತ್ತರಿಸದಿದ್ದರಿಂದ ಕುಟುಂಬಸ್ಥರು ದೂರು ನೀಡಿದ್ದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಅವರು ಮೃತಪಟ್ಟಿರುವುದು ಕಂಡು ಬರುತ್ತದೆ ಎಂದು ಹೇಳಿದ್ದಾರೆ. ಸಾವಿನ ನಿಖರವಾದ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ಸದ್ದಿಯನ್ನೂ ಓದಿ : Encounters: ಜಮ್ಮು ‍‍‍& ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ; ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಸಾವು