Thursday, 15th May 2025

Jio network : ದೇಶಾದ್ಯಂತ ಜಿಯೊ ನೆಟ್‌ವರ್ಕ್‌ ಸಮಸ್ಯೆ; ಗ್ರಾಹಕರಿಂದ ದೂರುಗಳ ಸುರಿಮಳೆ

ಬೆಂಗಳೂರು: ಭಾರತದಾದ್ಯಂತ ಜಿಯೋ ಬಳಕೆದಾರರು ಸೆಪ್ಟೆಂಬರ್ 17ರಂದು ನೆಟ್‌ವರ್ಕ್‌ (Jio network) ಸಮಸ್ಯೆ ಉಂಟಾಗಿದೆ. ಗ್ರಾಹಕರು ಸಾಮಾಜಿಕ ಜಾಲತಾಣಗಳ ಮೂಲಕ ತಮಗಾದ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಟ್ರ್ಯಾಕಿಂಗ್ ವೆಬ್‌ಸೈಟ್‌ ಡೌನ್ ಡಿಟೆಕ್ಟರ್ ಮಧ್ಯಾಹ್ನದ ವೇಳೆಗೆ ಸಮಸ್ಯೆ ವರದಿಗಳಲ್ಲಿ ತೀವ್ರ ಏರಿಕೆಯಾಗಿರುವುದನ್ನು ತೋರಿಸಿದೆ.

ಡೌನ್ ಡಿಟೆಕ್ಟರ್ ಪ್ರಕಾರ ಮಧ್ಯಾಹ್ನ 12.18 ರ ವೇಳೆಗೆ ಜಿಯೋ ಬಳಕೆದಾರರಿಂದ 10,367 ನೆಟ್ವರ್ಕ್ ದೋಷದ ವರದಿಗಳು ಬಂದಿವೆ. ಇದು ಇಂದು ಬೆಳಿಗ್ಗೆ 11.13 ಕ್ಕೆ 653 ವರದಿಗಳು ಮತ್ತು ಇಂದು ಬೆಳಿಗ್ಗೆ 10.13 ಕ್ಕೆ ಏಳು ವರದಿಗಳಿದ್ದವು. ಹೀಗೆ ಸಮಯ ಸಾಗುತ್ತಿದ್ದಂತೆ ಜನರಿಂದ ಸಮಸ್ಯೆಯ ಕುರಿತು ದೂರುಗಳು ದಾಖಲಾಗಿದ್ದವು.

ಶೇ.68ರಷ್ಟು ವರದಿಗಳು ‘ನೋ ಸಿಗ್ನಲ್’ ಬಗ್ಗೆ, ಶೇ.18ರಷ್ಟು ಮೊಬೈಲ್ ಇಂಟರ್ನೆಟ್ ಮತ್ತು ಶೇ.14ರಷ್ಟು ಜಿಯೋ ಫೈಬರ್ ಸಂಬಂಧಿತ ಸಮಸ್ಯೆ ಬಗ್ಗೆ ದೂರುಗಳು ನೀಡಿದ್ದಾರೆ.

ಇತರ ಟೆಲಿಕಾಂ ನೆಟ್ವರ್ಕ್‌ಗಳಾದ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಡೌನ್ ಡಿಟೆಕ್ಟರ್ ಡೇಟಾ ತಿಳಿಸಿದೆ.

ಎಚ್ಚರಿಕೆ ನೀಡಿದ ನೆಟ್ಟಿಗರು

ಹಲವಾರು ಬಳಕೆದಾರರು ಈ ವಿಷಯದ ಬಗ್ಗೆ ಎಕ್ಸ್‌ನಲ್ಲಿ ದೂರು ನೀಡಿದ್ದಾರೆ. ಕೆಲವರು ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡರೆ, ಇತರರು ತಮ್ಮ ಜಿಯೋ ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸಲು / ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಬಳಕೆದಾರರ ಒಂದು ವಿಭಾಗವು ಮೊಬೈಲ್ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದೆ.

ಜಿಯೋ ಬಳಕೆದಾರರು ‘ಜಿಯೋಡೌನ್’ ಹ್ಯಾಶ್‌ಟ್ಯಾಗ್‌ ಜತೆ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ ಕೆಲವು ಬಳಕೆದಾರರ ಪ್ರತಿಕ್ರಿಯೆಗಳು ಇಲ್ಲಿವೆ.

ಕೆಲವರು ಎಕ್ಸ್‌ನಲ್ಲಿ ಅಧಿಕೃತ ಖಾತೆಯನ್ನು ಉದ್ದೇಶಿಸಿ ಹೀಗೆ ಬರೆದಿದ್ದಾರೆ: “ಪ್ರಸ್ತುತ ಮುಂಬೈನಲ್ಲಿ ಫೈಬರ್ ಮತ್ತು ಜಿಯೋ ಸಿಮ್ ಎರಡರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿಮಗೆ ತಿಳಿಸಲು ಬರೆಯುತ್ತಿದ್ದೇನೆ. ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

“ಜಿಯೋ ನೆಟ್ವರ್ಕ್ ಸ್ಥಗಿತ, ವೊಡಾಫೋನ್ ಮತ್ತು ಏರ್ಟೆಲ್ ಬಳಕೆದಾರರು ಮೂಲೆಯಲ್ಲಿ ನಗುತ್ತಿದ್ದಾರೆ” ಎಂದು ಕೆಲವರು ಸಾಮಾನ್ಯ ಪರಿಹಾರವನ್ನು ಆಶ್ರಯಿಸಿದರು – ಹಾಸ್ಯ, “#jiodown ಮೂಲೆಯಲ್ಲಿ ನಗುತ್ತಿದ್ದಾರೆ”

“ಮುಖೇಶ್ ಅಂಬಾನಿ ನರಾಜ್ ಹೈ #JioDown #JioOutage”

Leave a Reply

Your email address will not be published. Required fields are marked *