Saturday, 10th May 2025

Jharkhand Horror:‌ 100 ವಿದ್ಯಾರ್ಥಿನಿಯರ ಶರ್ಟ್‌ ಬಿಚ್ಚಿಸಿ ಬರೀ ಬ್ಲೇಸರ್ಸ್‌ನಲ್ಲಿ ಮನೆಗೆ ಕಳಿಸಿದ ಪ್ರಿನ್ಸಿಪಾಲ್

ರಾಂಚಿ: ಜಾರ್ಖಂಡ್‌ನ(Jharkhand) ಧನ್‌ಬಾದ್(Dhanbad) ಜಿಲ್ಲೆಯ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರೊಬ್ಬರು(Principal) 100 ವಿದ್ಯಾರ್ಥಿನಿಯರ ಶರ್ಟ್‌ ತೆಗೆಸಿ ಬರೀ ಬ್ಲೇಸರ್‌ನಲ್ಲಿ ಕಳಿಸಿ ಅವಮಾನ ಮಾಡಿರುವ ಆತಂಕಕಾರಿ ಘಟನೆಯೊಂದು ವರದಿಯಾಗಿದೆ(Jharkhand Horror).

ಧನ್‌ಬಾದ್ ಜಿಲ್ಲೆಯ ಖಾಸಗಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು ತಮ್ಮ ಬೋರ್ಡ್‌ ಪರೀಕ್ಷೆಯ ಕೊನೆಯ ದಿನ ʼಸಿಗ್ನೇಚರ್‌ ಡೇʼ ಆಚರಿಸಿದ್ದು, ಪರಸ್ಪರ ಒಬ್ಬರಿಗೊಬ್ಬರ ಯೂನಿಫಾರ್ಮ್‌ ಶರ್ಟ್‌ ಮೇಲೆ ಸಹಿ ಮಾಡಿದ್ದಾರೆ. ಇದನ್ನು ಗಮನಿಸಿರುವ ಶಾಲೆಯ ಪ್ರಿನ್ಸಿಪಾಲ್‌ ಎಲ್ಲರ ಶರ್ಟ್‌ ಬಿಚ್ಚಿಸಿ ಬ್ಲೇಸರ್‌ನಲ್ಲಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿಯರು ಶರ್ಟ್‌ ಮೇಲೆ ಸಹಿ ಮಾಡಿಕೊಂಡು,ಒಂದಿಷ್ಟು ಸಂದೇಶಗಳನ್ನು ಬರೆದಿದ್ದಾರೆ. ಪ್ರಾಂಶುಪಾಲರು ಮನೆಗೆ ತೆರಳುವ ಮುನ್ನ ಸರಿ ಸುಮಾರು 100 ವಿದ್ಯಾರ್ಥಿಗಳ ಶರ್ಟ್‌ ತೆಗೆಸಿ ಅವಮಾನ ಮಾಡಿದ್ದಾರೆ. ಜಿಲ್ಲಾಧಿಕಾರಿ ಮಾಧ್ವಿ ಮಿಶ್ರಾ ಅವರು ಶನಿವಾರ(ಜ.11) ಪತ್ರಿಕಾಗೋಷ್ಠಿಯಲ್ಲಿ ಘಟನೆಯ ಸಂಬಂಧ ಮಾತನಾಡಿದ್ದಾರೆ. ಪೋಷಕರು ಮತ್ತು ಸ್ಥಳೀಯ ಶಾಸಕರಾದ ಝರಿಯಾ ರಾಗಿಣಿ ಸಿಂಗ್ ಶಾಲಾ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಪ್ರಾಂಶುಪಾಲರು ನಾಚಿಕೆಗೇಡಿನ ಕೆಲಸ ಮಾಡಿದ್ದಾರೆ ಎಂದು ಶಾಸಕರು ವಾಗ್ದಾಳಿ ನಡೆಸಿದ್ದಾರೆ. “ಒಬ್ಬ ಮಹಿಳೆಯಾಗಿ ವಿದ್ಯಾರ್ಥಿನಿಯರ ಜೊತೆ ಈ ರೀತಿ ವರ್ತಿಸಿರುವುದು ಸರಿಯಲ್ಲ. ಇದು ಆಘಾತಕಾರಿ ಬೆಳವಣಿಗೆ. ಘಟನೆಯ ನಂತರ ಹದಿಹರೆಯದ ಹುಡುಗಿಯರು ಮಾನಸಿಕವಾಗಿ ನೊಂದಿದ್ದಾರೆ” ಎಂದು ರಾಗಿಣಿ ಸಿಂಗ್ ಹೇಳಿದ್ದು, ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಕೂಡ ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರಿ ಶಾಲೆಯ ಪ್ರಾಂಶುಪಾಲ ಬಂಧನ!

ಕಳೆದ ಒಂದಷ್ಟು ತಿಂಗಳುಗಳ ಹಿಂದೆಯಷ್ಟೇ ಗುಜರಾತ್‌ನ ದಾಹೋದ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲರನ್ನು ಲೈಂಗಿಕ ಕಿರುಕುಳ ನೀಡಿ ಆರು ವರ್ಷದ ವಿದ್ಯಾರ್ಥಿನಿಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿತ್ತು. ದಾಹೋಡ್ ತಾಲೂಕಿನ ಸಿಂಟ್ವಾಡ್ ಗ್ರಾಮದ ಶಾಲಾ ಕಾಂಪೌಂಡ್‌ನಲ್ಲಿ ಮಗುವಿನ ಶವ ಪತ್ತೆಯಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ಶಾಲಾ ಪ್ರಾಂಶುಪಾಲ ಗೋವಿಂದ್ ನಾಥ್ ಅವರು, ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ರಾಜದೀಪ್ ಸಿಂಗ್ ಝಾಲಾ ಅವರು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್

Leave a Reply

Your email address will not be published. Required fields are marked *