Sunday, 11th May 2025

ಎಲೆಕ್ಟ್ರಾನಿಕ್ಸ್ ಶೋರೂಮ್​​ಗೆ ಬೆಂಕಿ: ನಾಲ್ವರು ಸಜೀವ ದಹನ

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯ ಸಿಪ್ರಿ ಭಜಾರ್​​ನಲ್ಲಿರುವ ಎಲೆಕ್ಟ್ರಾನಿಕ್ಸ್ ಶೋರೂಮ್​​ಗೆ ಬೆಂಕಿ ಬಿದ್ದು, ಮಹಿಳೆ ಸೇರಿ ನಾಲ್ವರು ಸಜೀವ ದಹನಗೊಂಡಿದ್ದಾರೆ. ಸೋಮವಾರ ತಡರಾತ್ರಿ ಬೆಂಕಿ ಹೊತ್ತಿ ಉರಿದಿದೆ. ಇಡೀ ಕಟ್ಟಡ ಬೆಂಕಿಗಾಹುತಿಯಾಗಿದೆ.

ಇದು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಎಲೆಕ್ಟ್ರಾನಿಕ್​ ವಸ್ತುಗಳು ಮತ್ತು ಕ್ರೀಡಾ ಸಾಮಗ್ರಿಗಳ ಶಾಪ್​ ಇಲ್ಲಿದ್ದವು.

ಕಟ್ಟಡದಲ್ಲಿದ್ದ ಜನರನ್ನು ರಕ್ಷಿಸುವ ಕಾರ್ಯಾಚರಣೆ ಸುಮಾರು 10 ತಾಸುಗಳ ಕಾಲ ನಡೆಯಿತು.

ಕಟ್ಟಡಕ್ಕೆ ಬೆಂಕಿ ಬೀಳುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರಿಗೆ ಕರೆ ಮಾಡಲಾಯಿತು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅಷ್ಟರಲ್ಲಿ ಮೂರು ಜನರ ಮೃತದೇಹ ಪತ್ತೆಯಾಗಿತ್ತು. ಶೋ ರೂಮ್​ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಮಹಿಳೆ ಪೂರ್ತಿಯಾಗಿ ಬೆಂದು ಹೋದ ಸ್ಥಿತಿಯಲ್ಲಿ ಸಿಕ್ಕಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾ ಯಿತು. ಆದರೆ ಬದುಕುಳಿದಿಲ್ಲ. ಬೆಂಕಿ ಹೊತ್ತಿ ಉರಿಯಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಬಹುತೇಕ ಎಲ್ಲ ಸಾಮಗ್ರಿಗಳೂ ಸುಟ್ಟುಕರಕಲಾಗಿವೆ ಎಂದು ಝಾನ್ಸಿ ಪೊಲೀಸ್ ಅಧಿಕಾರಿ ರಾಜೇಶ್ ಎಸ್. ತಿಳಿಸಿದ್ದಾರೆ.

ಕಳೆದ ತಿಂಗಳ ಗುಜರಾತ್​​ನ ರಾಜಕೋಟ್​​ನಲ್ಲಿರುವ ಗಾಲಾ ಗ್ರಾಮದ ಬಳಿಯ ಮೋರ್ಬಿ ಮಲಿಯಾ ಹೈವೇದಲ್ಲಿರುವ ಸಿಲಿಂಡರ್​ ಗೋದಾಮು ಸಂಪೂರ್ಣ ಸುಟ್ಟು ಬೂದಿಯಾಗಿತ್ತು.

Leave a Reply

Your email address will not be published. Required fields are marked *