Monday, 12th May 2025

ಜುಲೈ 3 ರಂದು ಜಂಟಿ ಪ್ರವೇಶ ಪರೀಕ್ಷೆ(ಅಡ್ವಾನ್ಸ್ಡ್): ರಮೇಶ್ ಪೋಖ್ರಿಯಾಲ್

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಅಡ್ವಾನ್ಸ್ಡ್) ಜುಲೈ 3 ರಂದು ನಡೆಯಲಿದ್ದು, ಈ ಪರೀಕ್ಷೆಯನ್ನ ಐಐಟಿ ಖರಗ್ ಪುರ ನಡೆಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ಪ್ರಕಟಿಸಿದ್ದಾರೆ.

12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ.75ಅಂಕ ಗಳಿಸುವ ಅರ್ಹತಾ ಮಾನದಂಡವನ್ನ ರದ್ದುಪಡಿಸಲಾಗಿದೆ ಎಂದು ತಮ್ಮ ಟ್ವಿಟರ್ ಮತ್ತು ಫೇಸ್ ಬುಕ್ ಪೇಜ್ʼಗಳ ಮೂಲಕ ತಿಳಿಸಿದ್ದಾರೆ.

ಜೆಇಇ ಮೇನ್ ಫೆಬ್ರವರಿಯಿಂದ ಮೇವರೆಗೆ ನಾಲ್ಕು ಅಧಿವೇಶನಗಳಲ್ಲಿ ನಡೆಯಲಿದೆ. ಜೆಇಇ ಮೇನ್ ಪರೀಕ್ಷೆಯ ಅಂತಿಮ ಅಧಿವೇಶನದ ಫಲಿತಾಂಶಗಳನ್ನ ಪ್ರಕಟಿಸಿದ ನಂತರವಷ್ಟೇ ಜೆಇಇ ಅಡ್ವಾನ್ಸ್ಡ್ ನಡೆಯಲಿದೆ. ವಿದ್ಯಾರ್ಥಿಗಳು ಐ.ಐ.ಟಿ.ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಮಾನದಂಡದಲ್ಲಿ ಕೊಂಚ ಸಡಿಲಿಕೆ ನಿರೀಕ್ಷಿಸಬಹುದು.

Leave a Reply

Your email address will not be published. Required fields are marked *