Sunday, 25th May 2025

Jaya Kishori: ಧಾರ್ಮಿಕ ಚಿಂತಕಿ ಕೈಯಲ್ಲಿ 2 ಲಕ್ಷ ರೂ. ಮೌಲ್ಯದ ಬ್ಯಾಗ್‌! ಇದೇನಾ ಸರಳ ಜೀವನ ಎಂದು ನೆಟ್ಟಿಗರು ಫುಲ್‌ ಗರಂ

Jaya kishori

ನವದೆಹಲಿ: ಆಧ್ಯಾತ್ಮಿಕ ಪ್ರಚಾರಕಿ(Spiritual preacher) ಮತ್ತು ಗಾಯಕಿ ಜಯ ಕಿಶೋರಿ(Jaya Kishori) ಅವರು ₹ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ದುಬಾರಿ ಹ್ಯಾಂಡ್‌ ಬ್ಯಾಗ್‌ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ನಂತರ ಟೀಕೆಗೆ ಗುರಿಯಾಗುತ್ತಿದ್ದಾರೆ. ಸದಾ ಲೌಕಿಕ ಮೋಹ ತ್ಯಜಿಸುವಂತೆ ಬೋಧನೆ ಮಾಡುವ ಜಯ ಕಿಶೋರಿ ಇದೀಗ ದುಬಾರಿ ಡಿಯೋ(Dior Bag) ಬ್ಯಾಗ್‌ ಹಿಡಿದು ಏರ್‌ಪೋರ್ಟ್‌ನಲ್ಲಿ ಫೊಟೋಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವೀಣಾ ಜೈನ್‌ ಎಂಬಾಕೆ ಜಯಾ ಕಿಶೋರಿಯವರ ಈ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿದ್ದು, ಇದು ಆಧ್ಯಾತ್ಮಿಕ ಪ್ರಚಾರಕಿ ಜಯಾ ಕಿಶೋರಿಯವರ ಡಿಲೀಟೆಡ್‌ ವಿಡಿಯೋ. ಇಲ್ಲಿ ಆಕೆಯ ಜೊತೆ ಕೇವಲ 210000 ರೂ. ಮೌಲ್ಯದ ಬ್ಯಾಗ್‌ ಇದೆ. ಈ ಮಧ್ಯೆ ಆಕೆ ಭೌತಿಕ ಬದುಕಿನ ಮೇಲಿನ ಮೋಹ ತ್ಯಜಿಸುವಂತೆ ಬೋಧನೆ ಮಾಡುತ್ತಾರೆ. ಅಲ್ಲದೇ ಎಲ್ಲಾ ಮೋಹ ತ್ಯಜಿಸಿದ ತಾನು ಕೃಷ್ಣ ಭಕ್ತೆ ಎಂದು ಹೇಳಿಕೊ‍ಳ್ಳುತ್ತಾಳೆ. ಅಲ್ಲದೇ ಈ ಬ್ಯಾಗನ್ನು ದನದ ಚರ್ಮದಿಂದ ತಯಾರಿಸಲಾಗುತ್ತದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಇನ್ನು ಈ ವಿಡಿಯೋಗೆ ಅನೇಕರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಜಯಾ ಕಿಶೋರಿ ಜನರು ಭೌತಿಕವಾಗಿ ಇರಬಾರದು ಎಂದು ಹೇಳುತ್ತಾರೆ, ಆದರೂ ಅವರು ಸ್ವತಃ ₹ 2 ಲಕ್ಷಕ್ಕೂ ಹೆಚ್ಚು ಬೆಲೆಯ ಐಷಾರಾಮಿ ಚೀಲವನ್ನು ಬಳಸುತ್ತಾರೆ. ಈ ಬೋಧಕರಲ್ಲಿ ಹೆಚ್ಚಿನವರು ಹೀಗೆಯೇ ಇದ್ದಾರೆ, ನಮ್ಮ ಧರ್ಮವನ್ನು ಲಾಭಕ್ಕಾಗಿ ಮತ್ತು ಅದ್ದೂರಿ ಜೀವನಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದು ಒಬ್ಬ ನೆಟ್ಟಿಗ ಕಮೆಂಟ್‌ ಮಾಡಿದ್ದಾರೆ.

ಜಯಾ ಕಿಶೋರಿ ಈಗ ಧಾರ್ಮಿಕ ಭಾಷಣಕಾರರಿಗಿಂತ ಹೆಚ್ಚು ಗ್ಲಾಮರಸ್ ಹುಡುಗಿಯಂತೆ ಕಾಣುತ್ತಿದ್ದಾರೆ ಎಂದು ಮತ್ತೊರ್ವ ಕಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Prakash Raj: ʻಗೌರಿ ಹತ್ಯೆ ಮತ್ತು ಮಗನ ಅಗಲಿಕೆ ಬದುಕಿನ ಅತಿ ದೊಡ್ಡ ದುರಂತ…ʼ ಭಾರೀ ವೈರಲ್‌ ಆಗ್ತಿದೆ ಪ್ರಕಾಶ್‌ ರಾಜ್ ಈ ವಿಡಿಯೋ